ಯಾದಗಿರಿ: ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ (ಎಸ್ಡಿಎ) ಅಂಜಲಿ ಗಿರೀಶ ಕಂಬಾನೂರ ಅವರ ಕೊಲೆ ಪ್ರಕರಣದ ಆರೋಪಿಯೊಬ್ಬರು ನ್ಯಾಯಾಲಯದ ಮುಂದೆ ಶರಣಾಗಿದ್ದು, ವಿಚಾರಣೆಯ ವೇಳೆ ಪೊಲೀಸರು ಆತನಿಂದ ಒಂದು ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ, ಕಲಬುರಗಿ ಜಿಲ್ಲೆಯ ಶಹಾಬಾದ್ ನಗರದ ನಿವಾಸಿ ಶಂಕರ ಅಳ್ಳೊಳ್ಳಿ ಶರಣಾದವರು. ಆತನಿಂದ ಪಿಸ್ತೂಲ್ ಹಾಗೂ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ವಿಜಯ ಸೇರಿ ಮೂವರನ್ನು ಪತ್ತೆ ಹಚ್ಚಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಶಂಕರ ಹಾಗೂ ವಿಜಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂಜಲಿ ಅವರ ಮೇಲೆ ದಾಳಿ ಮಾಡಿ ತಲೆ ಮರೆಸಿಕೊಳ್ಳಲು ಯತ್ನಿಸುತ್ತಿದ್ದ ದತ್ತಾತ್ರೇಯ, ಯಲ್ಲಪ್ಪ, ಜಗದೀಶ ಮತ್ತು ಕಾಶಿನಾಥ ಅವರನ್ನು ವಿಜಯಪುರದಲ್ಲಿ ಬಂಧಿಸಲಾಗಿತ್ತು. ತಲೆ ಮರೆಸಿಕೊಂಡು ಓಡಾಡುತ್ತಿದ್ದ ಶಂಕರ, ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾದರು’ ಎಂದು ಹೇಳಿವೆ.

‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ಜಿಲ್ಲಾ ಪೊಲೀಸರು ನ್ಯಾಯಾಲಯದ ಅನುಮತಿ ಮೆರೆಗೆ ಶಂಕರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ವೇಳೆ ತಡವಾಗಿ ಪಿಸ್ತೂಲ್ ಬಗ್ಗೆ ಬಾಯಿ ಬಾಟ್ಟಿದ್ದಾನೆ. ಅಂಜಲಿ ಅವರನ್ನು ಪಿಸ್ತೂಲ್ನಿಂದ ಶೂಟ್ ಮಾಡಲು ಅಕ್ರಮವಾಗಿ ಖರೀದಿಸಿ ತನ್ನ ಬಳಿ ಇರಿಸಿಕೊಂಡಿದ್ದನು. ಅಂಜಲಿ ಮೇಲೆ ಮಾರಕಾಸ್ತ್ರಗಳಿಂದ ದಾಳಿಯಾಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಹಾಗಾಗಿ, ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ಬೆಂಗಳೂರಿನಲ್ಲಿ ಮುಚ್ಚಿಟ್ಟದ್ದನ್ನು. ಬೆಂಗಳೂರಿಗೆ ತೆರಳಿ ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿವೆ.

ಜೀವ ಭಯಕ್ಕೆ ಪಿಸ್ತೂಲ್ ಮೊರೆ: ‘ತಲೆ ಮರೆಸಿಕೊಂಡಿರುವ ವಿಜಯ ಹಾಗೂ ಶರಣಾಗಿರುವ ಶಂಕರ ಅವರು ಅಂಜಲಿ ಅವರ ಪತ್ನಿ ಗಿರೀಶ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅಂಜಲಿ ಕೊಲೆ ಪ್ರಕರಣಕ್ಕೂ ಮುನ್ನ ಜಾಮೀನಿನ ಮೇಲೆ ಹೊರಬಂದಿದ್ದರು. 2025ರ ಸೆಪ್ಟೆಂಬರ್ 25ರ ಸಂಜೆ ಶಹಾಬಾದ್ ನಗರ ಹೊರವಲಯದಲ್ಲಿ ಶಂಕರ ಅವರು ಸ್ನೇಹಿತರೊಂದಿಗೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಆರೇಳು ಜನರಿದ್ದ ಗುಂಪೊಂದು ಅವರ ಮೇಲೆ ಏಕಾಏಕಿ ದಾಳಿ ಮಾಡಿತ್ತು. ಅಲ್ಲಿಂದ ತಪ್ಪಿಸಿಕೊಂಡಿದ್ದರು. ಆ ಘಟನೆಯಿಂದಾಗಿ ಭಯಭೀತರಾದ ಶಂಕರ, ಅನಧಿಕೃತವಾಗಿ ಪಿಸ್ತೂಲ್ ಇರಿಸಿಕೊಂಡಿದ್ದರು’ ಎಂದು ಗೊತ್ತಾಗಿದೆ.

ಡಿಸಿಆರ್ಇ ಹೆಗಲಿಗೆ ತನಿಖೆಯ ಹೊಣೆ

ಅಂಜಲಿ ಕೊಲೆ ಪ್ರಕರಣವು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ದಾಳಿ ಮಾಡಿ ತಲೆ ಮರೆಸಿಕೊಳ್ಳಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನೂ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಈಗ ತನಿಖೆಯ ಹೊಣೆಯನ್ನು ಡಿಸಿಆರ್ಇಗೆ ವಹಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆಯಲು ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಗೊಂದು ಡಿಸಿಆರ್ಇ ಠಾಣೆಯನ್ನು ತೆರೆಯಲಾಗಿದೆ. ಎಸ್ಸಿ ಹಾಗೂ ಎಸ್ಟಿ ಸಂಬಂಧಿತ ಎಲ್ಲಾ ಪ್ರಕರಣಗಳ ತನಿಖೆಯೂ ಇದರ ವ್ಯಾಪ್ತಿಗೆ ಬರಲಿವೆ. ಇನ್ಸ್ಪೆಕ್ಟರ್ ರಾಜಶೇಖರ ಹಳಿಗೋಧಿ ನೇತೃತ್ವದಲ್ಲಿ ತನಿಖೆಗಳು ನಡೆಯುತ್ತಿವೆ.

ಕೊಲೆಗೆ ವ್ಯಾಪಾರದ ಸುಪಾರಿ!

‘ಅಂಜಲಿ ಅವರನ್ನು ಕೊಲೆ ಮಾಡಿದರೆ ಜೀವನ ನಡೆಸಲು ಬೇಕಾಗುವು ಖರ್ಚು ವೆಚ್ಚವನ್ನು ನೋಡಿಕೊಂಡು ಯಾವುದಾರೂ ವ್ಯಾಪಾರ ಮಾಡಿಸಿಕೊಡುವುದಾಗಿ ಸುಪಾರಿ ಕೊಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. ‘ದಾಳಿ ಮಾಡಿದ ಬಂಧಿತರಾದವರ ಕಾಶಿನಾಥ ಸೇರಿ ಇತರರು ಶಹಾಬಾದ್ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.