ಭಾನುವಾರ, ಆಗಸ್ಟ್ 25, 2019
28 °C

ಚಿಂಚನಸೂರಗೆ ಸಚಿವ ಸ್ಥಾನ ನೀಡಲು ಮನವಿ

Published:
Updated:
Prajavani

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಜಿಲ್ಲಾ ಕೋಲಿ (ಗಂಗಾಮತ) ಸಮಾಜದ ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿತು.

ಹೈದರಾಬಾದ್‌ ಕರ್ನಾಟಕದ ಕೋಲಿ ಸಮಾಜದ ಪ್ರಬಲ ನಾಯಕರಾಗಿರುವ ಬಾಬುರಾವ ಚಿಂಚನಸೂರ ಅವರು ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಿಎಂಗೆ ಮನವರಿಕೆ ಮಾಡಿದರು.

ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಮಡ್ಡಿ, ಉಪಾಧ್ಯಕ್ಷ ಪರಶುರಾಮ ಸೇಗುಲಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಬಳಿಚಕ್ರ, ಖಂಡರಾದ ಚಂದ್ರಕಾಂತ ಮಡ್ಡಿ, ವಿಂದ್ರಪ್ಪ ಬೆಸ್ತ, ಹಣಮಂತಪ್ಪ ಬಳಿಚಕ್ರ, ಶರಣಪ್ಪ ಮೋಟ್ನಳ್ಳಿ, ಸುರೇಶ ಮಡ್ಡಿ, ಸುರೇಶ ಕೋಟಿಮನಿ, ಚಂದ್ರಶೇಖರ ಬಾಡಿಯಾಳ, ಮಲ್ಲಣ್ಣ ಕರಡಿ, ಸಾಬಣ್ಣ ಬಾಡಿಯಾಳ, ಶಂಕರ ಗೋಸಿ, ಹಣಮಂತ ಚಾಮನಳ್ಳಿ, ಸಾಬರೆಡ್ಡಿ, ಶರಣಪ್ಪ ಆಶನಾಳ, ಮಲ್ಲಪ್ಪ ಹೆಮೆಗನೋರ್, ಮೌನೇಶ ಬೆಳಗೇರಾ, ಶಾಂತಪ್ಪ ಚಾಮನಾಳ, ಸುರೇಶ ಆನಂಪಲ್ಲಿ ಇದ್ದರು.

Post Comments (+)