ಮಂಗಳವಾರ, ಜುಲೈ 5, 2022
21 °C
ಈಶಾನ್ಯ ಸಾರಿಗೆ ಸಂಸ್ಥೆ: ರಜೆ ನಿರ್ವಹಣೆ ಆನ್‌ಲೈನ್‌ ವ್ಯವಸ್ಥೆ ಜಾರಿ

ಯಾದಗಿರಿ | ಇನ್ಮುಂದೆ ಮೊಬೈಲ್‌ನಲ್ಲೇ ರಜೆಗೆ ಅರ್ಜಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಂತ್ರಾಂಶ ಆಧಾರಿತ ರಜೆ ಅರ್ಜಿ ನಿರ್ವಹಣೆ ವ್ಯವಸ್ಥೆಯನ್ನು (ಎಲ್‌ಎಂಎಸ್‌) ಜಾರಿಗೆ ತಂದಿದ್ದು, ಚಾಲಕ ಮತ್ತು ನಿರ್ವಾಹಕರು ಈಗ ಮೊಬೈಲ್‌ನಲ್ಲಿಯೇ ರಜೆಗೆ ಅರ್ಜಿ ಸಲ್ಲಿಸಬಹುದು.

ಈ ಹಿಂದೆ ಚಾಲಕರು ಮತ್ತು ನಿರ್ವಾಹಕರು ಡಿಪೊಗೆ ತೆರಳಿ ಕಿಯೋಸ್ಕ್‌ ಯಂತ್ರದ ಮೂಲಕ ರಜೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಈಗ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಮೊಬೈಲ್, ಕಂಪ್ಯೂಟರ್‌ನಲ್ಲಿಯೇ ಅರ್ಜಿ ಸಲ್ಲಿಸಿ ರಜೆ ಪಡೆಯಬಹುದಾಗಿದೆ.

ರಜೆ ಪಡೆಯುವ ವಿಧಾನ: ರಜೆ ತೆಗೆದುಕೊಳ್ಳಬೇಕಾದ ಸಿಬ್ಬಂದಿ ಮೊಬೈಲ್‌ ಅಥವಾ ಕಂಪ್ಯೂಟರ್‌ನಿಂದ ಗೂಗಲ್‌ ಕ್ರೋಮ್‌ ಮುಖಾಂತರ lms.nekrtc.org ವೆಬ್‌ಸೈಟ್‌ಗೆ ಪ್ರವೇಶ ಪಡೆದು ಪಿಎಫ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಬೇಕು. ನಂತರ ಅಪ್ಲೆ ಲೀವ್‌ ಎಂಬ ಬಟನ್‌ ಕ್ಲಿಕ್ಕಿಸಿದಾಗ ಎರಡು ವಿಧದ ರಜೆ– ಅಲ್ಪಾವಧಿ ರಜೆ (1ರಿಂದ ಮೂರು ದಿನ), ದೀರ್ಘ ರಜೆ (4ರಿಂದ 15 ದಿನ)  ಆಯ್ಕೆಯು ಪರದೆಯ ಮೇಲೆ ಮೂಡಿಬರುತ್ತದೆ.

ಈ ಎರಡರಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡಲ್ಲಿ ಸಿಬ್ಬಂದಿಯ ಸಿಎಲ್, ಇಎಲ್‌, ಸಿಎಂಎಲ್‌ ಬಾಕಿ ವಿವರಗಳು ಸಿಗುತ್ತವೆ. ಅಗತ್ಯವಿರುವ ರಜೆ ಆಯ್ಕೆ ಮಾಡಿದ ನಂತರ ರಜೆ ಎಲ್ಲಿಂದ ಎಲ್ಲಿಯವರೆಗೆ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಆಯ್ಕೆ ಮಾಡಿಕೊಂಡು ರಜೆ ಅಪ್ಲೆ ಮಾಡುವುದು, ರಜೆ ಕೋಟಾದಡಿ ರಜೆ ಲಭ್ಯವಿದ್ದಲ್ಲಿ ಮಾತ್ರ ರಜೆ ಲಭ್ಯವಿರುತ್ತದೆ. ರಜೆ ಮಂಜೂರಾದಲ್ಲಿ ಸಿಬ್ಬಂದಿಯ ಮೊಬೈಲ್‌ಗೆ ರಜೆ ಮಂಜೂರಾತಿ ಸಂದೇಶ ಬರುತ್ತದೆ.

ಮತ್ತೇನಿದೆ ಇದರಲ್ಲಿ: ಮಂಜೂರಾದ ರಜೆಗಳಲ್ಲಿ ಭಾಗಶಃ ಮತ್ತು ಪೂರ್ಣ ರಜೆಗಳನ್ನು ರದ್ದು
ಪಡಿಸಲು ಇಚ್ಛಿಸಿದಲ್ಲಿ ಸಿಬ್ಬಂದಿ ರದ್ಧತಿ ರಜೆ ಬಟನ್ ಆಯ್ಕೆ ಮಾಡಿ, ರದ್ಧತಿ ರಜೆಯ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಆಯ್ಕೆ ಮಾಡಿಕೊಂಡು ರದ್ಧತಿ ರಜೆ ಬಟನ್‌ ಆಯ್ಕೆ ಮಾಡಿದರೆ ರದ್ಧತಿಯಾಗುತ್ತದೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶವೂ ಬರುತ್ತದೆ.

ಮೊಬೈಲ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಕೂಡ ಬದಲಾಯಿಸಬಹುದು. ಹಾಗೆಯೇ ರಜೆ ಸಾರಾಂಶ ಮಾಹಿತಿ ಲಭ್ಯವಾಗುತ್ತದೆ. ಒಂದು ವರ್ಷದಲ್ಲಿ ಕೇವಲ 3 ದಿನಗಳ ಮಾತ್ರ ತುರ್ತು ರಜೆಯನ್ನು ಘಟಕ ವ್ಯವಸ್ಥಾ
ಪಕರಿಂದ ಪಡೆಯಹುದಾಗಿದೆ.

‘ಜಿಲ್ಲೆಯಲ್ಲಿ 1,085 ಚಾಲಕರು ಚಾಲಕ ಮತ್ತು ನಿರ್ವಾಹಕರು ಇದ್ದಾರೆ. ಒಂದು ಡಿಪೊದಲ್ಲಿ ಶೇಕಡ 9ರಷ್ಟು ಮಾತ್ರ ರಜೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಶೇಕಡ 2ರಷ್ಟು ತುರ್ತು ಸಂದರ್ಭದಲ್ಲಿ ಡಿಪೊ ಮ್ಯಾನೇಜರ್‌ ರಜೆ ನೀಡಬಹುದಾಗಿದೆ. ಶೇಕಡ 7ರಷ್ಟು ಸಿಬ್ಬಂದಿ ಆಲ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಹೇಳುತ್ತಾರೆ.

‘ರಜೆ ಪಡೆಯುವ ಸಿಬ್ಬಂದಿ ದಿನಾಂಕದ ಹಿಂದಿನಿಂದ 30 ದಿನಗಳ ಅವಧಿಯಲ್ಲಿ ಕನಿಷ್ಠ 22 ದಿನ ಕರ್ತವ್ಯ ನಿರ್ವಹಿಸಿರಬೇಕು ಎಂಬ ನಿಯಮವಿದೆ. ಸಿಬ್ಬಂದಿ ಕನಿಷ್ಠ 48 ಗಂಟೆಗಳ (2 ದಿನ) ಮುಂಚಿತವಾಗಿ ರಜೆ ಪಡೆಯಲು ಅವಕಾಶ ಇರುತ್ತದೆ. ರಜೆ ರದ್ದತಿಯನ್ನು ರಜೆ ಪಡೆದಿರುವ ದಿನಾಂಕದ 24 ಗಂ
ಟೆಗಳ ಮುಂಚಿತವಾಗಿ ರದ್ದುಪಡಿಸಬೇಕು’ ಎನ್ನುತ್ತಾರೆ ಅವರು.

ಸಿಬ್ಬಂದಿಗೆ ಕೋಟಾದಡಿ ರಜೆ ಸಿಗದಿದ್ದಲ್ಲಿ ಹಾಗೂ ಹೆರಿಗೆ, ಇನ್ನಿತರ ಕಾರಣಗಳಿಂದ ರಜೆ ಅವಶ್ಯವಿದ್ದಲ್ಲಿ ನೇರವಾಗಿ ಘಟಕ ವ್ಯವಸ್ಥಾ‍ಪಕರಿಗೆ ರಜೆ ಅರ್ಜಿ ಸಲ್ಲಿಸಿದರೆ ಅದನ್ನು ಪ್ರತಿ ತಿಂಗಳಿಗೊಮ್ಮೆ ವಿಭಾಗೀಯ ಕಚೇರಿಯಲ್ಲಿ ನಿಯಂತ್ರಣಾಧಿಕಾರಿ ನೇತೃತ್ವದಲ್ಲಿ ಸಮಿತಿ ಮುಂದೆ ಸಲ್ಲಿಸಲಾಗುತ್ತಿದೆ‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು