ಯಾದಗಿರಿ: ಚಿತ್ರಕಲಾ ಶಿಕ್ಷಕರಾಗಿ ಮಹತ್ವದ ಸಾಧನೆ ಮಾಡಿ ನಿವೃತ್ತಿಯಿಂದ ನಿರ್ಗಮಿಸಿದರೂ ಅವರ ಕೊಡುಗೆ ಅನನ್ಯ ಎಂದು ಗುರುಮಠಕಲ್ ಖಾಸಾ ಮಠದ ಶ್ರೀಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಪಾಟೀಲ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುಮಠಕಲ್ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಬಿಳ್ಹಾರ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ, ಚಿತ್ರ ಕುಂಚ, ಸಂಗೀತ ನೃತ್ಯ ಬೀಳ್ಕೊಡುಗೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಚಿತ್ರಕಲೆಯಲ್ಲಿ ರಾಜ್ಯಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರವಾಗಿದೆ ಎಂದು ನುಡಿದರು.

ಡಯಟ್ ಪ್ರಾಚಾರ್ಯ ವೃಷಭೇಂದ್ರ, ಬಿಆರ್ಸಿ ಮಲ್ಲಿಕಾರ್ಜುನ ಪೂಜಾರಿ, ಚಿತ್ರಕಲಾ ರಾಜ್ಯ ಘಟಕ ಅಧ್ಯಕ್ಷ ಅಡಿವೆಪ್ಪ ಅವತಾಳೆ, ಸುಜಾತ ಆರ್., ಚಿತ್ರಕಲಾವಿದರಾದ ಅಬ್ರಾಹಂ ಬೆಳ್ಳಿ, ಸಂತೋಷ್ ಕುಮಾರ್ ನಿರೇಟಿ, ರವೀಂದ್ರ ಚಿಂತನಪಲ್ಲಿ, ಬಿ.ಕೆ.ಶಾಂತಕ್ಕ, ಲಕ್ಷ್ಮೀಕಾಂತ್ ರೆಡ್ಡಿ, ಬಿ. ದೇವಿಂದ್ರಪ್ಪ, ಮರೆಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ಜೋಶಿ, ಕೆ.ಎಂ.ಸಂಶಿ, ಲಿಂಗನಗೌಡ, ಶಂಕರಾಚಾರ್ಯ, ಅನಿಲ್ ಕುಮಾರ್, ಗಂಗಾಧರ್ ಭಾಗವಹಿಸಿದ್ದರು.

ಕೆ.ಎಸ್.ದಿಶಾ, ಶಾಂಭವಿ ಬಿಳ್ಹಾರ ಭರತನಾಟ್ಯ ಪ್ರದರ್ಶನ ಮಾಡಿದರು. ನೃತ್ಯ ಸಂಗೀತಕ್ಕೆ ಸಮಾನಾಂತರವಾಗಿ ಸ್ಥಳದಲ್ಲೇ ಬಸವಂತಪ್ಪ ದೊಡ್ಡಮನಿ ಸಂಗೀತದ ಜೊತೆಗೆ ಭರತ ನಾಟ್ಯ ಮಾಡುವ ಬಾಲೆಯ ಚಿತ್ರ ಬಿಡಿಸಿ ಗಮನ ಸೆಳೆದರು.

ಸವಿತಾ ಪ್ರಾರ್ಥನೆ ಗೀತೆ ಹಾಡಿದರು. ಶಿವಪುತ್ರಪ್ಪ ವಿಶ್ವಕರ್ಮ ಸ್ವಾಗತಿಸಿದರು. ಚನ್ನಪ್ಪ ಹುಣಸಗಿ ಪ್ರಾಸ್ತಾವಿಕ ಮಾತನಾಡಿದರು. ಶೋಭಾ ಕುಂಬಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.