ಶುಕ್ರವಾರ, ಅಕ್ಟೋಬರ್ 30, 2020
23 °C
ಸಂಸದೀಯ ಪಟುವಾಗಿ ಮಿಂಚುವ ತಪ್ಪಿದ ಅವಕಾಶ

ಗಸ್ತಿ ನಿಧನ: ಬಿಜೆಪಿಯಿಂದ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯಸಭಾ ಸದಸ್ಯ ಹಾಗೂ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಅಶೋಕ ಗಸ್ತಿಯವರಿಗೆ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. 

ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಅಶೋಕ ಗಸ್ತಿ ಅವರು ಅಕಾಲಿಕವಾಗಿ ನಿಧನರಾಗಿರುವುದು ನಮಗೆಲ್ಲ ಅತೀವ ದುಃಖ ತಂದಿದೆ. ಇತ್ತೀಚೆಗಷ್ಟೇ ಗಸ್ತಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಿ ಹೊಸ ಭರವಸೆ ಮೂಡಿಸಿದ್ದರು. ಭವಿಷ್ಯದಲ್ಲಿ ಉತ್ತಮ ಸಂಸದೀಯ ಪಟುವಾಗಿ ಮಿಂಚುವ ಎಲ್ಲಾ ಲಕ್ಷಣಗಳು ಅವರಲ್ಲಿದ್ದವು. ಬಿಜೆಪಿಯಲ್ಲಿ ಅಚಲ ನಿಷ್ಠೆಯಿಂದ ದುಡಿಯುತ್ತ, ಸದಾ ತೆರೆಮರೆಯಲ್ಲೇ ಸೇವೆಗೈಯ್ಯುತ್ತಿದ್ದರು ಎಂದು ಹೇಳಿದರು.

ರಾಜ್ಯ ಎಸ್ಸಿ ಮೋರ್ಚಾ ರಾಜ್ಯ ಘಟಕ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಸ್ವಂತ ಪರಿಶ್ರಮದ ಮೇಲೆ ರಾಜ್ಯಸಭೆಯವರೆಗೂ ಬಂದ ಗಸ್ತಿ ಅವರು, ಇನ್ನಷ್ಟು ಸಾಧನೆಗಳ ಹೊಸ್ತಿಲಿನಲ್ಲಿರುವಾಗಲೇ ಅವರ ಅಂತ್ಯವಾಗಿದ್ದು, ವಿಧಿಯ ಕ್ರೌರ್ಯವೇ ಸರಿ. ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಸ್ಮರಿಸಿದರು.

ಮಾಜಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ಗಸ್ತಿಯವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್, ನಾಮದೇವ ರಾರೋಡ, ಈಶಪ್ಪ ಹಿರೇಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೇಂದ್ರನಾಥ್ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಚನ್ನುಗೌಡ ಬಿಳ್ಹಾರ, ರವಿ ಮಾಲಿಪಾಟೀಲ, ದೇವರಾಜ ನಾಯಕ ಉಳ್ಳೆಸೂಗುರ, ಭೀಮನಗೌಡ ಕ್ಯಾತನಾಳ, ಸ್ವಾಮಿದೇವ ದಾಸನಕೇರಿ, ಭೀಮಾಶಂಕರ ಬಿಲ್ಲವ್, ಶಂಕರ್ ಸೋನಾರ್, ವೀಣಾ ಮೋದಿ, ಸುನಿತಾ ಚವ್ಹಾಣ್, ಶಕುಂತಲಾ, ಕಲ್ಪನಾ ಜೈನ್, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ರಾಜಶೇಖರ ಕಾಡಂನೋರ, ಮಲ್ಲಿಕಾರ್ಜುನ ಹೊನಗೇರಾ, ಮೋನೋಹರ ಪವ್ಹಾರ, ಚಂದ್ರಶೇಖರ್ ಗಂಗನಾಳ, ಮಹಾದೇವಪ್ಪ ಗಣಪುರ, ಶರಣು ಆಶನಾಳ, ಹಣಮಂತ ವಲ್ಲಾಪುರೆ, ಶಂಕರ ಕರಣಿಗಿ, ಮಲ್ಲನಗೌಡ ಗುರುಸುಣಿಗಿ, ಮಲ್ಲು ಕೋಲಿವಾಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು