ಶಹಾಪುರ: ಮಾನಹಾನಿ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾಗಿದ್ದರಿಂದ ಬುಧವಾರ ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪೂಜಾರ ಅವರು ವ್ಯಕ್ತಿಗೆ ₹ 23 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ತಾಲ್ಲೂಕಿನ ಗಂಗನಾಳ ಗ್ರಾಮದ ಭೀಮಣ್ಣಗೌಡ ಗುಡದಪ್ಪಗೌಡ ದಂಡನೆ ಒಳಗಾದ ವ್ಯಕ್ತಿ.

2023ರ ಸೆಪ್ಟೆಂಬರ್ 30ರಂದು ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಬಂದ ಭೀಮಣ್ಣಗೌಡ ಕೈ ಹಿಡಿದು ಜಗ್ಗಾಡಿದ್ದ ಎಂದು ಆರೋಪಿಸಿ ನೊಂದ ಮಹಿಳೆಯು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗೋಗಿ ಠಾಣೆಯ ಅಂದಿನ ಪಿಎಸ್ಐ ದೇವಿಂದ್ರರಡ್ಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಿರ್ಯಾದಿದಾರರ ಪರವಾಗಿ ಎಪಿಪಿ ಮರೆಪ್ಪ ಹೊಸಮನಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.