ಶುಕ್ರವಾರ, ಫೆಬ್ರವರಿ 3, 2023
18 °C
ವಡಗೇರಾ ತಾಲ್ಲೂಕು ತುಮಕೂರು ಗ್ರಾಮದ ನಿವಾಸಿ ಬಸವರಾಜ ಸಂಕೀನ್

ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದ ಕಾಂಗ್ರೆಸ್ ಸ್ಪೇನ್ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಧ್ಯಪ್ರದೇಶದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇಂಡಿಯನ್ ಓವರ್‌ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ, ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದ ನಿವಾಸಿ ಬಸವರಾಜ ಸಂಕೀನ್ ಹೆಜ್ಜೆ ಹಾಕಿದರು.

ಯಾತ್ರೆಯಲ್ಲಿ ಭಾಗವಹಿಸಲೆಂದೇ ಅವರು ಈಚೆಗೆ ಸ್ಪೇನ್‌ನಿಂದ ಬಂದಿದ್ದಾರೆ. ಬಾಹ್ಯಾಕಾಶ ಎಂಜಿನಿಯರ್ ಆಗಿರುವ ಬಸವರಾಜ ಸಂಕೀನ್ ಹಲವು ವರ್ಷಗಳಿಂದ ಸ್ಪೇನ್ ದೇಶದಲ್ಲಿ ನೆಲೆಸಿದ್ದಾರೆ.

ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಬಸವರಾಜ ಸಂಕೀನ್ ಅವರೊಂದಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು. ‘ಪಕ್ಷ ಸಂಘಟನೆಗೆ ಯುವ ಜನತೆ ಕಠಿಣವಾಗಿ ಶ್ರಮಿಸುವುದು ತುಂಬ ಅಗತ್ಯವಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಇಂಡಿಯನ್ ಓವರ್‌ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ ಸಂಕೀನ್, ಭಾರತ್ ಜೋಡೊ ಯಾತ್ರೆಗೆ ದೇಶದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ರಾಜಕೀಯ ದಿಕ್ಕನ್ನು ಬದಲಿಸುವುದರಲ್ಲಿ ಅನುಮಾನವೇ ಇಲ್ಲ.ಸ್ವಯಂ ಪ್ರೇರಿತರಾಗಿ ಜನತೆ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜಕಾರಣಿಗಳು ಮಾತ್ರವಲ್ಲ. ಸಿನಿಮಾ, ಸಾಮಾಜಿಕ ಹೋರಾಟಗಾರರು ಮತ್ತು ಮಹಿಳಾ ಹೋರಾಟಗಾರರು ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ
ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು