ಗುರುವಾರ , ಅಕ್ಟೋಬರ್ 6, 2022
24 °C

ಚಂದ್ರಕಲಾ ಗೂಗಲ್‌ಗೆರಾಜ್ಯ ಮಟ್ಟದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ತಾಲ್ಲೂಕಿನ ಹಾಲಬಾವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಚಂದ್ರಕಲಾ ಪಿ. ಗೂಗಲ್ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ (ಪ್ರಾಥಮಿಕ ಶಾಲಾ ವಿಭಾಗ) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ತಾಲ್ಲೂಕಿನ ಮಹಲರೋಜಾ ಗ್ರಾಮದಲ್ಲಿ 8 ವರ್ಷ ಹಾಗೂ ಹಾಲಬಾವಿ ಶಾಲೆಯಲ್ಲಿ ಕಳೆದ 15 ವರ್ಷದಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆಯ ಮಹತ್ವಕಾಂಕ್ಷೆ ಯೋಜನೆಯಾದ ನಲಿಕಲಿ ರಾಜ್ಯ ಸಂಪನ್ಮೂಲ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಾನು ಸುರಪುರ ತಾಲ್ಲೂಕಿನ ನಗನೂರ ಗ್ರಾಮದ ನಿವಾಸಿ. ನನ್ನ ಪತಿ ವ್ಯಾಪಾರ ಮಾಡುತ್ತಾರೆ. ಮಗಳು ವೈದ್ಯಕೀಯ ವಿದ್ಯಾರ್ಥಿನಿ. ಮಗ ವಿಜಯಪುರದ ಸೈನಿಕ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಸಂಸ್ಥೆಗಳಿಗಿಂತ ಉನ್ನತ ಮಟ್ಟದ ಶಿಕ್ಷಣ ನೀಡುವ
ಕೆಲಸವಾಗಬೇಕು.

ಪಾಲಕರು ಸರ್ಕಾರಿ ಶಾಲೆಯ ಕಡೆ ಮುಖ ಮಾಡಬೇಕು. ಹಳ್ಳಿ ಹುಡುಗನಿಗೆ ಗುಣಮಟ್ಟದ ಶಿಕ್ಷಣ ಸಿಕ್ಕರೆ ಎಲ್ಲವನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.