ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೀಮಾ ನದಿ | ಜಮೀನುಗಳಿಗೆ ನುಗ್ಗಿದ ನೀರು: ಆರೋಪ

Published : 30 ಆಗಸ್ಟ್ 2024, 15:58 IST
Last Updated : 30 ಆಗಸ್ಟ್ 2024, 15:58 IST
ಫಾಲೋ ಮಾಡಿ
Comments

ಶಹಾಪುರ: ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಹತ್ತಿ ನಿರ್ಮಿಸಿರುವ ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಗೇಟು ತ್ವರಿತವಾಗಿ ಎತ್ತರಿಸದ ಕಾರಣ ಭೀಮಾ ನದಿ ಪಾತ್ರದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಭೀಮಾ ನದಿ ಪಾತ್ರದ ರೈತರು ಆರೋಪಿಸಿದ್ದಾರೆ.

ತಾಲ್ಲೂಕಿನ ಭೀಮಾ ನದಿ ಪಾತ್ರದಲ್ಲಿ ಶಿರವಾಳ, ಅಣಬಿ, ರೋಜಾ, ಹುರಸಗುಂಡಗಿ ಗ್ರಾಮಮ ಬರುತ್ತವೆ. ಭೀಮಾ ನದಿಗೆ ಏಕಾಏಕಿ ನೀರಿನ ಹರಿವು ಹೆಚ್ಚಾದಾಗ ಸನ್ನತಿ ಬಳಿಯ ಬ್ಯಾರೇಜ್ ಗೇಟ್ ತಡವಾಗಿ ಎತ್ತರಿಸಿದರು. ಇದರಿಂದ ಹಿನ್ನೀರು ಹೆಚ್ಚು ಸಂಗ್ರಹವಾಗಿ ಜಮೀನುಗಳಿಗೆ ನುಗ್ಗಿವೆ. ಬೆಳೆದು ನಿಂತರ ಭತ್ತ ಹಾಗೂ ಹತ್ತಿ ಬೆಳೆ ಹಾನಿಯಾಗಿದೆ ಎಂದು ರೈತ ಮುಖಂಡ ಮರೆಪ್ಪ ಪ್ಯಾಟಿ ಶಿರವಾಳ ದೂರಿದ್ದಾರೆ.

ಹೆಚ್ಚಿನ ನೀರು ಭೀಮಾ ನದಿಗೆ ಹರಿದು ಬರುವ ಮಾಹಿತಿ ಅರಿತುಕೊಂಡು ಬ್ಯಾರೇಜ್ ಮೂಲಕ ನದಿಗೆ ನೀರು ಹರಿಸಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ತಡವಾಗಿ ಗೇಟ್ ಎತ್ತರಿಸಿದ್ದಾರೆ ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಿದ್ದಾರೆ. ಖುದ್ದಾಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭೀಮಾ ನದಿಗೆ ಹೆಚ್ಚಿನ ನೀರು ಹರಿದು ಬಂದಿಲ್ಲ. ಪ್ರವಾಹ ಪರಿಸ್ಥಿತಿ ಉಂಟಾಗಿಲ್ಲ. ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಮೂಲಕ ಹೆಚ್ಚಿನ ನೀರು ನದಿಗೆ ಹರಿಬಿಟ್ಟಿದೆ. ನದಿ ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದ್ದರೆ ಪರಿಶೀಲಿಸಲಾಗುವುದು
ಉಮಾಕಾಂತ ಹಳ್ಳೆ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT