ಶುಕ್ರವಾರ, ಜೂನ್ 18, 2021
27 °C

ಪಿಪಿಇ ಕಿಟ್ ಧರಿಸಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ರಾಜೂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕು ಆಸ್ಪತ್ರೆಗೆ ಶಾಸಕ ರಾಜೂಗೌಡ ಬುಧವಾರ ಭೇಟಿ ನೀಡಿ ಕೋವಿಡ್‌ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ತೆರಳಿದ ಶಾಸಕ ಸೋಂಕಿತರ ಬೆಡ್‌ ಬಳಿ ತೆರಳಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿದ್ದಾರೆ.

ಎಷ್ಟು ದಿನ ಆಯಿತು ಆಸ್ಪತ್ರೆಗೆ ಬಂದು ಆರಾಮ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸೋಂಕಿತರು ಚೆನ್ನಾಗಿದ್ದೇವೆ ಎಂದು ಉತ್ತರಿಸಿದ್ದಾರೆ.

ನಿನ್ನ ಮಗನೆ ಎಂದ ಶಾಸಕ: ಎಲ್ಲರನ್ನು ವಿಚಾರಿಸುತ್ತ ವೃದ್ಧೆಯ ಬಳಿ ತೆರಳಿ ಅಮ್ಮ ಅರಾಮ ಇದ್ದೀರಿ ಎಂದು ಪ್ರಶ್ನಿಸಿದಾಗ ನನ್ನ ಮಕ್ಕಳೆ ನನ್ನನ್ನು ನೋಡಲು ಬಂದಿಲ್ಲ. ನೀವು  ಬಂದೀರಿ ಎಂದು ವೃದ್ಧೆ ಹೇಳುತ್ತಾರೆ. ನಾನು ನಿನ್ನ ಮಗನೇ, ರಾಜೂಗೌಡ ನಿನ್ನ ಮಗ. ಚಿಂತೆ ಮಾಡಬೇಡ ಎಂದು ಸೋಂಕಿತ ವೃದ್ಧೆಗೆ ಸಾಂತ್ವನ ಮಾತು ಹೇಳಿದ್ದಾರೆ. ರಾಜೂಗೌಡ ಮಾತು ಕೇಳಿದ ವೃದ್ಧೆ ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು