ಗುರುವಾರ , ಜೂನ್ 17, 2021
21 °C
‘ಒಲವಿನ ಮಧುಬಟ್ಟಲು’ ಗಜಲ್‌ ಕವನ ಸಂಕಲನ, ‘ವಚನಕಾರ ಉರಿಲಿಂಗ ಪೆದ್ದಿ’ ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ ‌ಕಾರ್ಯಕ್ರಮ ದೊಡ್ಡ ಸಾಂಸ್ಕೃತಿಕ ಹಬ್ಬ: ಪ್ರೊ. ಕಾಶಿನಾಥ ಅಂಬಲಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಪುಸ್ತಕ ಬಿಡುಗಡೆ ‌ಕಾರ್ಯಕ್ರಮ ಜಗತ್ತಿನ ಅತಿ ದೊಡ್ಡ ಸಾಂಸ್ಕೃತಿಕ ಹಬ್ಬ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕಾಶಿನಾಥ ಅಂಬಲಗಿ ಅಭಿಪ್ರಾಯಪಟ್ಟರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಒಲವಿನ ಮಧುಬಟ್ಟಲು’ ಗಜಲ್‌ ಕವನ ಸಂಕಲನ ಮತ್ತು ‘ವಚನಕಾರ ಉರಿಲಿಂಗ ಪೆದ್ದಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಪುಸ್ತಕಗಳು ಬೇರೆ ಎಲ್ಲ ಸಾಂಸ್ಕೃತಿಕ ಮಾಧ್ಯಮಗಳಿಗಿಂತ ದೀರ್ಘಕಾಲದವರೆಗೆ ತನ್ನ ಪ್ರಭಾವ ಉಳಿಸಿಕೊಂಡು ಹೋಗುವ ಶಕ್ತಿಶಾಲಿ ಸಾಂಸ್ಕೃತಿಕ ರಾಯಭಾರಿಯಾಗಿದೆ’ ಎಂದು ಹೇಳಿದರು.

‘ಪುಸ್ತಕ ಕಾಲಾಂತರದವರೆಗೂ ತನ್ನ ಪ್ರಭಾವ ಉಳಿಸಿಕೊಂಡು ಬರುವಂತೆ ಇರಬೇಕು. ಪುಸ್ತಕ ಸುಡುವ ಕಾರ್ಯಕ್ರಮ ಹಮ್ಮಿಕೊಂಡರೆ ಅದರಲ್ಲಿ ತನ್ನ ಪುಸ್ತಕ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವಂತಿರಬೇಕು’ ಎಂದು ಸಾಹಿತಿ ಬೆಟ್ಟನ ಉದಾಹರಣೆಗೆಯೊಂದಿಗೆ ಹೇಳಿದರು.

ರಾಯಚೂರಿನ ಸರ್ಕಾರಿ ಪ್ರಥಮ‌ ದರ್ಜೆ ಸಹಾಯಕ ಪ್ರಾಧ್ಯಾಪಕ ಡಾ. ದಸ್ತಾಗೀರ್‌ಸಾಬ್ ದಿನ್ನಿ ಮಾತನಾಡಿ, ‘ಗಜಲ್ ಬೆಳೆದ ಬಂದ ದಾರಿಯನ್ನು ವಿವರಿಸಿ ಹೊರ ದೇಶದಲ್ಲಿ ಜನಿಸಿ ಇರಾನ್‌ ಮುಂತಾದ ದೇಶಗಳ ಮುಖಾಂತರ ದೇಶಕ್ಕೆ ಬಂದು ಉರ್ದು ಭಾಷೆಯಲ್ಲಿ ನೆಲೆಗೊಂಡಿತ್ತು’ ಎಂದು ಹೇಳಿದರು.

ಗುರುಮಠಕಲ್ ಖಾಸಾಮಠದ ಶ್ರೀಗಳಾದ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಭೀಮರಾಯ ಲಿಂಗೇರಿ ಪ್ರಸ್ತಾವಿಕ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಟಿ.ಕಟ್ಟಿಮನಿ, ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ, ಉಪನ್ಯಾಸಕಿ ಡಾ. ಜ್ಯೋತಿಲತಾ ತಡಿಬಿಡಿಮಠ, ಅಶೋಕ ‌ಮಟ್ಟಿ, ಗಜಲ್‌ ಕವಿಯತ್ರಿ ಭಾಗ್ಯವಂತಿ ಕೆಂಭಾವಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಭುಲಿಂಗ ನಿಲೂರೆ, ಎಸ್‌.ಎಸ್‌.ನಾಯಕ, ಗುರಪ್ಪ ವಿಶ್ವಕರ್ಮ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು