ಯಾದಗಿರಿ: ‘ನಾಡಿಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಅವಶ್ಯವಿದೆ’ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ದಿ.ವಿಶ್ವನಾಥರೆಡ್ಡಿ ಗೌಡ ಮುದ್ನಾಳ ಸಭಾಂಗಣದಲ್ಲಿ ಭೀಮ ಜ್ಯೋತಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕುರಿತ ನಾಟಕ ಪ್ರದರ್ಶನ ಡಾ.ಬಿ.ಆರ್. ಅಂಬೇಡ್ಕರ್ ಸೇವರತ್ನ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಉತ್ತಮ ನಡೆ, ರಾಷ್ಟ್ರೀಯ ಏಕತೆ ಮೂಡಲು ಎಲ್ಲರೂ ಒಂದಾಗಿ ನಡೆಯಬೇಕು. ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಬಿತ್ತುವ ಕೆಲಸವನ್ನು ಈ ಸಂಸ್ಥೆ ಮಾಡಿದೆ’ ಎಂದರು.

ಪ್ರಶಸ್ತಿಯನ್ನು ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಹೋರಾಟಗಾರ ಮರೆಪ್ಪ ಚಟ್ಟರಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಸ್ ಚನ್ನಬಸಪ್ಪ (ಡಿಎಚ್ಒ ಡಾ. ಮಹೇಶ ಬಿರಾದಾರ, ಬಾಬು ಗಂಗೂ ಚವ್ಹಾಣ್ ಗೈರು) ಅವರಿಗೆ ಪ್ರದಾನ ಮಾಡಲಾಯಿತು.

ವಿಜಯನಗರದ ತುಂಗಭದ್ರ ತಂಡ ‘ನಮ್ಮ ಸಂವಿಧಾನ’ ನಾಟಕ ಪ್ರದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಚನ್ನಬಸಪ್ಪ ಮುಧೋಳ, ಉದ್ಯಮಿ ಮಲ್ಲಿಕಾರ್ಜುನ್ ಶಿರಗೋಳ, ಸಂಸ್ಥೆ ಅಧ್ಯಕ್ಷ ಭೀಮಶಂಕರ್ ಎಂ ಯರಗೋಳ, ಕಾಲೇಜಿನ ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ, ಪ್ರಮುಖರಾದ ಸಾಯಿಬಣ್ಣ ಕುರಕುಂದಿ, ಶ್ರೀಶೈಲ ಹೊಸಮನಿ, ಮಲ್ಲಿಕಾರ್ಜುನ್ ಗೋಸಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.