ಬುಧವಾರ, ಜನವರಿ 19, 2022
27 °C

ಬಸ್ ಪಲ್ಟಿ: 20 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಕಲಬುರಗಿ ಜಿಲ್ಲೆಯ ಸೇಡಂ ಬಸ್ ಘಟಕದ ಸೇಡಂ-ಹೈದರಾಬಾದ್ ಮಾರ್ಗದ ಕೆ.ಎ.32 ಎಫ್ 2419 ಬಸ್ ಪಲ್ಟಿಯಾಗಿ 20 ಜನರಿಗೆ ಗಾಯಗಳಾದ ಘಟನೆ ಶನಿವಾರ ಜರುಗಿದೆ.

ಶನಿವಾರ ಬೆಳಿಗ್ಗೆ ಸೇಡಂ ನಗರದಿಂದ ಗುರುಮಠಕಲ್ ತಾಲ್ಲೂಕಿನ ಚಂಡರಿಕಿ ಮಾರ್ಗವಾಗಿ ಹೈದರಾಬಾದ್‌ ನಗರಕ್ಕೆ ತೆರಳುವಾಗ ತೆಲಂಗಾಣ ರಾಜ್ಯದ ನಾರಾಯಣಪೇಟ-ಲೋಕಪಲ್ಲಿ ನಡುವೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿಯಾಗಿದೆ.

ಗಾಯಾಳುಗಳಿಗೆ ನಾರಾಯಣಪೇಟ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸೇಡಂ ಹಾಗೂ ಗುರುಮಠಕಲ್ ಬಸ್ ಘಟಕಗಳ ವ್ಯವಸ್ಥಾಪಕರಿಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ.

ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಎಲ್ಲರಿಗೂ ಸಾಮಾನ್ಯ ಗಾಯಗಳಾಗಿವೆ. ಈ ಮಾರ್ಗದಲ್ಲಿ‌ ಮೊದಲ ಬಾರಿಗೆ ಬಂದಿದ್ದ ಚಾಲಕನಿಗೆ ರಸ್ತೆಯ ತಿರುವಿನ ಕುರಿತು ಗೊತ್ತಿರಲಿಲ್ಲ. ಬಸ್‌ ವೇಗದಲ್ಲಿದ್ದ ಕಾರಣ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾರಾಯಣಪೇಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.