ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾ ಭಗವತಿ ಉತ್ಸವ: ಪುಣ್ಯಸ್ನಾನ

Last Updated 5 ಮೇ 2022, 3:14 IST
ಅಕ್ಷರ ಗಾತ್ರ

ನಾರಾಯಣಪುರ: ಕೃಷ್ಣಾ ನದಿ ತೀರದ ದಕ್ಷಿಣ ಕಾಶಿ ಛಾಯಾ ಭಗವತಿ ಕ್ಷೇತ್ರದಲ್ಲಿ ಅಕ್ಷಯ ತೃತೀಯ ದಿನದಂದು ಭಕ್ತರು 18 ಪವಿತ್ರ ತೀರ್ಥಕುಂಡಗಳಲ್ಲಿ ಪುಣ್ಯಸ್ನಾನ ಮಾಡಿದರು.

ಮಂಗಳವಾರ ಬೆಳಿಗ್ಗೆ 5ಕ್ಕೆ ಕ್ಷೇತ್ರ ಪುರೋಹಿತರ ಮಾರ್ಗದರ್ಶನದಲ್ಲಿ ಜರುಗಿದ ತೀರ್ಥಸ್ನಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿ ಪವಿತ್ರ ಸ್ನಾನ ಮಾಡಿ ಛಾಯಾ ಭಗವತಿ ದರ್ಶನ ಪಡೆದರು.

ಕಠಿಣವಾದ ಯಾತ್ರೋತ್ಸವ ಮುಗಿಸಿದ ಭಕ್ತರಿಗೆ ಸ್ಥಳೀಯ ಗುರುರಾಜ ಭಜನಾ ಮಂಡಳಿಯವರು ಉಪಾಹಾರ ವ್ಯವಸ್ಥೆ ಮಾಡಿದ್ದರು. ಕಳೆದ 15 ವರ್ಷಗಳಿಂದಲೂ ಇದನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ಭಕ್ತಿಯ ಸೇವೆ ಬಗ್ಗೆ ಭಕ್ತ ವೃಂದದವರಿಂದ ಪ್ರಶಂಸೆ ವ್ಯಕ್ತವಾಯಿತು.

ನಂತರ ಸರ್ವ ಭಕ್ತರೂ ಸೇರಿ ಭಜನೆ, ದೇವರನಾಮ ಸ್ಮರಣೆಯೊಂದಿಗೆ ಛಾಯಾ ಭಗವತಿ ದೇವಿಯ ಉತ್ಸವದಲ್ಲಿ ಪಾಲ್ಗೊಂಡ ನಂತರ ಸತ್ಯನಾರಾಯಣ ಪೂಜೆ, ವಸಂತ ಪೂಜೆ ನೆರವೇರಿಸಿ ಅನ್ನಪ್ರಸಾದ ಸ್ವೀಕರಿಸಿದರು. ಕಲಬುರಗಿಯ ಧಾರ್ಮಿಕ ಚಿಂತಕರಾದ ಗೋಪಾಲ ಕುಲಕರ್ಣಿ ಅವರು ಮಾತನಾಡಿ ಶ್ರೀ ಛಾಯಾ ಭಗವತಿ ಕ್ಷೇತ್ರದ ಮಹಿಮೆ, ಸ್ಥಳ ಪುರಾಣ, 18 ತೀರ್ಥ ಸ್ನಾನ ಹಾಗೂ ಛಾಯಾ ದೇವಿ ಮತ್ತು ಯಾತ್ರೆಗೆ ಆಗಮಿಸಿದ ಎಲ್ಲಾ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಿರುವ ಇಲ್ಲಿನ ಅರ್ಚಕ ವರ್ಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಪುಣ್ಯಾರ್ಥ ಬಾಗಿನ ಸಮರ್ಪಣೆ: ಪುರಾಣದಲ್ಲಿ ಉಲ್ಲೇಖದಂತೆ ಸೀತಾಮಾತೆ ಈ ಕ್ಷೇತ್ರದಲ್ಲಿ ಪುಣ್ಯಾರ್ಥವಾಗಿ ಮರದ ಬಾಗಿನ ಅರ್ಪಿಸಿದ್ದರ ಪ್ರತೀಕವಾಗಿ ಇದೇ ಸಂದರ್ಭದಲ್ಲಿ ಯಾತ್ರಾ ಮಹೋತ್ಸವಕ್ಕೆ ಆಗಮಿಸುವ ಮಹಿಳೆಯರು ದೇವಿಗೆ ಮರದ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಶ್ರೀ ಛಾಯಾ ದೇವಿಯ ಭಕ್ತರು ಆಗಮಿಸಿ ಯಾತ್ರಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬುಧವಾರ ಘಟ ವಿಸರ್ಜನೆ ಮತ್ತು ಗಂಗಾರಾಧನೆಯೊಂದಿಗೆ ಯಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ದೇವಸ್ಥಾನದ ಅರ್ಚಕರಾದ ಕಲ್ಲಪ್ಪಾಚಾರ್ಯ ಜೋಶಿ, ಶಾಮಾಚಾರ್ಯ ಜೋಶಿ, ಹನುಮೇಶ ಕುಲಕರ್ಣಿ, ಕೃಷ್ಣಾಚಾರ್ಯ ಜೋಶಿ, ಭೀಮಭಟ್ಟ ಜೋಶಿ, ಪರಿಕ್ಷೀತಾಚಾರ್ಯ ಜೋಶಿ, ಚಿದಂಬರಭಟ್ ಜೋಶಿ, ಬಸವಂತಭಟ್ಟ ಜೋಶಿ, ಗುರುರಾಜ ಜೋಶಿ, ವೆಂಕಟೇಶ ಜೋಶಿ, ಪ್ರಮೋದ ಜೋಶಿ, ಗಂಗಾಧರ ಜೋಶಿ, ಜಗನ್ನಾಥ ಆಚಾರ್ಯ ಜೋಶಿ, ಆರ್ಚಕ ರಾಘವೇಂದ್ರ ಆಚಾರ್ಯ, ಮಲ್ಲಣ್ಣ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಪ್ರವೀಣ ಯಾತ್ರೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT