ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌–ಬಿಜೆಪಿ ಕಾರ್ಯಕರ್ತರ ಮಾರಾಮಾರಿ

ರಸ್ತೆ ಅಡಿಗಲ್ಲು ಸಮಾರಂಭದಲ್ಲಿ ಉದ್ವಿಗ್ನ ಪರಿಸ್ಥಿತಿ
Last Updated 27 ಸೆಪ್ಟೆಂಬರ್ 2022, 15:58 IST
ಅಕ್ಷರ ಗಾತ್ರ

ಯಾದಗಿರಿ: ಗುರುಮಠಕಲ್‌ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಮತ್ತು ಬಿಜೆ‍ಪಿ ವಿಧಾನ ಪರಿಷತ್‌ ಸದಸ್ಯ ಬಾಬುರಾವ್ ಚಿಂಚನಸೂರ ಬೆಂಬಲಿಗರ ನಡುವೆ ತಾಲ್ಲೂಕಿನ ಸಾವೂರ ಗ್ರಾಮದಲ್ಲಿ ಮಂಗಳವಾರ ಬ್ಯಾನರ್‌ ಕುರಿತು ಗಲಾಟೆಯಾಯಿತು.

‌‌ರಸ್ತೆ ಕಾಮಗಾರಿಗೆ ಶಾಸಕ ನಾಗನಗೌಡ ಕಂದಕೂರ ಅವರು ಚಾಲನೆ ನೀಡುವ ಗುರುಮಠಕಲ್ ಮತಕ್ಷೇತ್ರದ ಸಾವೂರ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ, ಬ್ಯಾನರ್‌ನಲ್ಲಿ ಶಾಸಕ ನಾಗನಗೌಡ ಕಂದಕೂರ ಅವರ ಚಿತ್ರ ಮಾತ್ರವಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಇಬ್ಬರು ನಾಯಕರ ಸಮ್ಮುಖದಲ್ಲೇ ಕೈಯಲ್ಲಿ ಕುರ್ಚಿ ಹಿಡಿದು ಹೊಡೆದಾಡಿದರು.

ಇದರಿಂದ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್ಯಕರ್ತರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಕಾರ್ಯಕ್ರಮ ಸರಾಗವಾಗಿ ನಡೆಯಿತು.

‘ಬ್ಯಾನರ್‌ನಲ್ಲಿ ಚಿತ್ರ ಹಾಕುವ ವಿಷಯ ನನ್ನದಲ್ಲ. ಅದೆಲ್ಲ ಅಧಿಕಾರಿಗಳ ಕೆಲಸ. ನನ್ನ ರಾಜಕೀಯ ಜೀವನದಲ್ಲಿ ಚಿಲ್ಲರೆ ರಾಜಕಾರಣ ಮಾಡಿಲ್ಲ’ ಎಂದು ನಾಗನಗೌಡ ಕಂದಕೂರ ತಿಳಿಸಿದರು.

‘ಬ್ಯಾನರ್‌ನಲ್ಲಿ ನನ್ನ ಚಿತ್ರ ಹಾಕದ ಕಾರಣ ಸಹಜವಾಗಿಯೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಬಾಬುರಾವ ಚಿಂಚನಸೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT