ಪ

ಯಾದಗಿರಿ: ‘ನಗರದ ಏಕದಂಡಗಿ ಮಠದಲ್ಲಿ ಜನವರಿ 1ರ ಮಧ್ಯಾಹ್ನ 1 ಗಂಟೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಕಾರ್ಯಕ್ರಮನ್ನು ಆಚರಣೆ ಮಾಡಲಾಗುವುದು’ ಎಂದು ಮಠದ ಗುರುಗಳಾದ ಕುಮಾರಸ್ವಾಮಿ ಹೇಳಿದರು.

ಮಠದ ಆವರಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ತಾಪುರ ತಾಲ್ಲೂಕಿನ ಸೂಗೂರು (ಎನ್) ಗ್ರಾಮದ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಹಿರಗಪ್ಪ ತಾತ, ಶ್ರೀನಿವಾಸ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮಾಜ ಹಲವು ಹಿರಿಯ ಮುಖಂಡರು ಭಾಗವಹಿಸುವರು’ ಎಂದು ತಿಳಿಸಿದರು.

‘ ಬೇಲೂರು, ಹಳೇಬೀಡಿನಲ್ಲಿ ಜಕಣಾಚಾರಿ ಅವರು ಕೆತ್ತಿರುವ ಶಿಲ್ಪಕಲೆಯು ದೇಶದ ವಾಸ್ತುಶಿಲ್ಪ ವೈಭವಕ್ಕೆ ಸಾಕ್ಷಿಯಾಗಿವೆ. ಇಂದಿಗೂ ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಚಕಣಾಚಾರಿ ಒಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವ ಮೂಲಕ ಕಲಾಜಗತ್ತಿನ ಸರ್ವಶ್ರೇಷ್ಠ ಶಿಲ್ಪಕಾರರನ್ನು ಅಳಿಸಲು ಕೆಲವರು ಕುತಂತ್ರ ಮಾಡುತ್ತಿದ್ದಾರೆ’ ಎಂದರು.

‘ಶಿಲ್ಪಕಲಾ ಜಗತ್ತಿನ ಮೂಲಪುರುಷನಾದ ಜಕಣಾಚಾರಿ ಜಯಂತಿಯನ್ನು ಆಚರಣೆ ಮಾಡುವ ಮೂಲಕ ನಾವು ಇಂದಿನ ಪೀಳಿಗೆಗೆ ಅವರ ಕಲೆಯ ಬಗ್ಗೆ ಪರಿಚಯಿಸುವ ಕೆಲಸವನ್ನು ಮಾಡುತ್ತೇವೆ. ಸರ್ಕಾರವು ಶಿಲ್ಪಕಲೆಯ ಉತ್ಸವ ಆಚರಣೆ ಮಾಡುವುದರ ಜೊತೆಗೆ ಶಿಲ್ಪಗಳನ್ನು ಕೆತ್ತಿರುವ ಶಿಲ್ಪಕಾರರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ಮಠದಲ್ಲಿ ಸರಸ್ವತಿ ಪೀಠದ ಗರ್ಭಗುಡಿ, ನರಸಿಂಹ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣದಂತಹ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಮಠದ ಭಕ್ತರಿಗೆ ಅವುಗಳ ಬಗ್ಗೆ ತಿಳಿಸಿ, ಜಕಣಾಚಾರಿ ಅವರ ಕೊಡುಗೆಗಳನ್ನು ನೆನೆಯಲು ಮಠದಲ್ಲಿಯೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶೇಖರತಾತ ಮುಷ್ಟೂರು, ಲಕ್ಷ್ಮಿಕಾಂತ ಪಂಚಾಳ, ಮೊನಪ್ಪ ಬೆಳಗುಂದಿ, ನಿಂಗಣ್ಣ, ಮೋನಪ್ಪ, ಖಂಡಪ್ಪ ಕೂಡ್ಡುರ, ಜೀವಣ್ಣ, ದೇವರಾಜು, ವಿಶ್ವನಾಥ, ವೀರಣ್ಣ, ಮೌನೇಶ ಕಲ್ಲೂರ, ಕ್ಯಾದಿಗೆಪ್ಪ, ಶಂಕರ ಸೋನಾರ, ಸುಭಾಷ, ರವಿ ಬಾಗೆವಾಡಿ, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.