ಶಹಾಪುರ: ತಾಲ್ಲೂಕಿನಲ್ಲಿ ಮೂರು ದಿನದಿಂದ ಮಧ್ಯಾಹ್ನವಾಗುತ್ತಿದ್ದಂತೆ ಆರಂಭವಾಗುವ ಮಳೆ ಒಮ್ಮೆ ಜೋರಾಗಿ ಸುರಿದು ನಂತರ ಜಿಟಿ ಜಿಟಿ ಮಳೆ ಸುರಿಯಲು ಆರಂಭಿಸಿದೆ. ಇದರಿಂದ ತಗ್ಗು ಪ್ರದೇಶ ಹಾಗೂ ಜೇಡಿ ಮಣ್ಣಿನ ಭೂಮಿಯಲ್ಲಿ ಬಿತ್ತನೆ ಮಾಡಿರುವ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿ ಬೆಳೆ ಮಾಡುವ ಆತಂಕವನ್ನು ಹತ್ತಿಬೆಳೆಗಾರರು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜಮೀನುಗಳಲ್ಲಿ ಹೆಚ್ಚಿನ ತೇವಾಂಶವಿದೆ. ಹತ್ತಿ ಬೆಳೆಯು ಹುಲುಸಾಗಿ ಬೆಳೆದು ಕೆಲ ಕಡೆ ಹೂ, ಮೊಗ್ಗು ಬಿಡಲಾರಂಭಿಸಿವೆ. ಈಗಾಗಲೇ ನಾವು ಒಂದು ಬಾರಿ ರಸಗೊಬ್ಬರವನ್ನು ಹಾಕಿದ್ದೇವೆ. ಬೆಳೆಯು ತುಂಬಾ ಹುಲುಸಾಗಿ ಬೆಳೆದು ನಳ ನಳಿಸುತ್ತಲಿವೆ. ಆದರೆ ಈಚೆಗೆ ಸುರಿಯುತ್ತಿರುವ ಹೆಚ್ಚಿನ ಮಳೆಗೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತ ಮಾಳಪ್ಪ.

ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗಿದ್ದು ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಅಲ್ಲದೆ ತಣ್ಣನೆಯ ಗಾಳಿ ಮತ್ತು ಆಗಾಗಾ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ವಾತಾವರಣವು ತಂಪಾಗಿದ್ದರಿಂದ ಚಿಕ್ಕ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿವೆ ಎನ್ನುತ್ತಾರೆ ಮಹಿಳೆ ಗೌರಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.