ಶುಕ್ರವಾರ, ಜನವರಿ 24, 2020
18 °C

ದೇಶದ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ಇದೆ: ಡಿವೈಎಸ್‌ಪಿ ಯು. ಶರಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಪುರಾತನ ಕಾಲದಿಂದಲೂ ಶಿಲ್ಪಕಲೆಗಳಿಗೆ ಹೆಚ್ಚಿನ ಆದ್ಯತೆ ಇದೆ. ಜಗತ್ತಿನಲ್ಲೇ ದೇಶದ ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ’ ಎಂದು ಡಿವೈಎಸ್‌ಪಿ ಯು. ಶರಣಪ್ಪ ಹೇಳಿದರು.

ನಗರದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾವಿದ ಹಣಮಂತ ಡಿ.ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾಕೃತಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಲ್ಪಕಲೆ ಕಠಿಣ ಕಲೆಯಾಗಿದೆ. ಮೊದಲು ಶ್ರಮವಹಿಸಿ ಶಿಲ್ಪ ತಯಾರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಯಂತ್ರಗಳಿಂದ ತಯಾರಿಸಲಾಗುತ್ತಿದೆ. ಎಷ್ಟೇ ಯಂತ್ರಗಳು ಬಂದರೂ ಕಲೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದರು.

ಹಿರಿಯ ಚಿತ್ರಕಲಾವಿದ ಸಂಗಣ್ಣ ಹೋತಪೇಟೆ, ಪ್ರಾಂಶುಪಾಲ ಭೀಮರಾಯ ಮಾನೇಗಾರ ಇದ್ದರು. ಪ್ರಶಾಂತಕುಮಾರ ಗುಮಳಾಪುರಮಠ ಸ್ವಾಗತಿಸಿ, ನಿರೂಪಿಸಿದರು. ಶಿವಕುಮಾರ ಎಂ.ಪಾಲ್ಕಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು