ಹುಣಸಗಿ: ತಾಲ್ಲೂಕಿನ ನಾರಾಯಣಪುರದ ಬಳಿಯ ಸುಕ್ಷೇತ್ರ ಛಾಯಾ ಭಗವತಿ ದೇವಸ್ಥಾನದಲ್ಲಿ ಮೇ 11 ರಿಂದ ಮೇ 15 ರವರೆಗೆ ಐದು ದಿನಗಳ ಕಾಲ ನಡೆಯಬೇಕಿದ್ದ ದಕ್ಷಿಣ ಛಾಯಾ ಭಗವತಿಯ ಯಾತ್ರಾ ಮಹೋತ್ಸವ ಈ ವರ್ಷವು ಕೂಡಾ ಕೋವಿಡ್ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ತಿಳಿಸಿರುವ ದೇವಸ್ಥಾನದ ಅರ್ಚಕ ಶಾಮಾಚಾರ್ಯ ಜೋಶಿ ಮಾತನಾಡಿ, ಛಾಯಾ ಭಗವತಿ ಕ್ಷೇತ್ರದಲ್ಲಿ 18 ಪವಿತ್ರ ತೀರ್ಥ ಸ್ನಾನ ಸೇರಿದಂತೆ ಯಾವುದೆ ಉತ್ಸವಗಳು, ಧಾರ್ಮಿಕ ಆಚರಣೆಗಳನ್ನು ರದ್ದುಗೊಳಿಸಲಾಗಿದೆ. ಭಕ್ತರು ಯಾರು ಕ್ಷೇತ್ರಕ್ಕೆ ಆಗಮಿಸಬಾರದು ಎಂದು ತಿಳಿಸಿದ್ದಾರೆ. ಪ್ರತಿಯೊಬ್ಬ ಭಕ್ತರು ತಮ್ಮ ಮನೆಯಲ್ಲಿಯೇ ಇದ್ದು ಛಾಯಾ ಭಗವತಿ ದೇವಿಯ ಪೂಜೆ ಮಾಡಬೇಕು ಎಂದು ಮನವಿ ಮಾಡಿದರು.

ಅರ್ಚಕರಾದ ಕೆ.ವಿ.ಜೋಶಿ, ಭೀಮಭಟ್ಟ ಜೋಶಿ, ಸತ್ಯನಾರಾಯಣ ಜೋಶಿ, ಪರಿಕ್ಷೀತ ಜೋಶಿ, ವೆಂಕಟೇಶ ಜೋಶಿ, ಚಿದಂಬರಭಟ್ಟ ಜೋಶಿ,ಬಸವಂತಭಟ್ಟ ಜೋಶಿ, ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.