ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ ಹಚ್ಚುವುದರಿಂದ ಅಜ್ಞಾನ ದೂರ: ಸಂಗಮೇಶ್ವರ ಸ್ವಾಮೀಜಿ

ಸಂಗಮದ ಸಂಗಮೇಶ್ವರ ಮಠದ ವತಿಯಿಂದ ಶಿವ ದೀಪೋತ್ಸವ
Published 17 ಡಿಸೆಂಬರ್ 2023, 14:30 IST
Last Updated 17 ಡಿಸೆಂಬರ್ 2023, 14:30 IST
ಅಕ್ಷರ ಗಾತ್ರ

ವಡಗೇರಾ: ಕಾರ್ತಿಕ ದೀಪೋತ್ಸವದಲ್ಲಿ ದೀಪ ಹಚ್ಚುವುದರಿಂದ ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಹಾಗೂ ಕಷ್ಟಗಳು ದೂರವಾಗುತ್ತವೆ ಎಂದು ಸಂಗಮೇಶ್ವರ ಪೀಠಾಧಿಪತಿ ಸಂಗಮೇಶ್ವರ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದಿಂದ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶಿವ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾರ್ತಿಕ ಮಾಸವು ಹಿಂದೂಗಳಿಗೆ ಪವಿತ್ರ ಮಾಸಗಳಲ್ಲೊಂದು. ಈ ಮಾಸದಲ್ಲಿ ನಾವು ಬೆಳಗಿಸಿದ ಜ್ಯೋತಿ ಮನೆ–ಮನವನ್ನು ಬೆಳಗುತ್ತದೆ ಎಂಬ ಪ್ರತೀತಿಯಿದೆ. ಆತ್ಮದ ಶುದ್ಧೀಕರಣ ಮತ್ತು ಪರಮಾತ್ಮನೊಂದಿಗೆ ಒಂದಾಗಲು ಪವಿತ್ರ ಕಾರ್ತಿಕ ಮಾಸದಲ್ಲಿ ಪ್ರತಿಯೊಬ್ಬರು ದೀಪಾರಾಧನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಮಾಜಿ– ಹಾಲಿ ಶಾಸಕರು ಹಾಗೂ ವಡಗೇರಾ ತಾಲ್ಲೂಕಿನ ಹಾಲಿ–ಮಾಜಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ಪತ್ನಿ ಸಂತೋಷಿರಾಣಿ, ವಡಗೇರಾ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್, ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಸಂಗ್ವಾರ, ಶಹಾಪುರ ಕೃಷಿ ಮಾರುಕಟ್ಟೆ ತಾಲ್ಲೂಕು ಅಧ್ಯಕ್ಷ ಅಯ್ಯಣ್ಣ  ಹಾಲಗೇರಾ, ವೀರಭದ್ರಯ್ಯ ಸ್ವಾಮಿ ದೇವಸೂಗೂರ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪಗೌಡ ಕಾರಡ್ಡಿ ಮಲ್ಹಾರ, ಸಿದ್ದರಾಮಪ್ಪಗೌಡ ಬೆಳಗುಂದಿ, ಚಂದ್ರಶೇಖರಗೌಡ ಗೋನಾಲ, ರವಿಪಾಟೀಲ ಮನಗೂಳಿ, ವಿಶ್ವನಾಥ್ ರೆಡ್ಡಿ ಗೌಡ ಬಿಳ್ಹಾರ, ಶ್ರೀನಿವಾಸ ರೆಡ್ಡಿಗೌಡ ಚೆನ್ನೂರು, ಮರಿಲಿಂಗಪ್ಪ ಸಾಹುಕಾರ ಕುಮನೂರು, ಮೋಹನ್ ರಾವ್ ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಜನಪ್ರತಿನಿಧಿಗಳು, ಮಾಜಿ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸುತ್ತಲಿನ ಗ್ರಾಮದ ಭಕ್ತರು, ಮಹಿಳೆಯರು ಮಠದ ಸಮಿತಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT