ಸೋಮವಾರ, ಮಾರ್ಚ್ 1, 2021
17 °C

ಗ್ರಾಮ ಪಂಚಾಯಿತಿ ಸದಸ್ಯರು ಸಮುದಾಯ ಹಿತಕ್ಕೆ ಶ್ರಮಿಸಲು ದೇವರಾಜ ಅರಸು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ‘ಶೋಷಿತ ಸಮಾಜ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಾದರೆ ನೂತನವಾಗಿ ಗ್ರಾಮ ಪಂಚಾಯಿಗೆ ಆಯ್ಕೆಯಾದ ಪರಿಶಿಷ್ಟ ಸಮಾಜದ ಸದಸ್ಯರು ಸಮುದಾಯದ ಹಿತಕ್ಕೆ ಶ್ರಮಿಸಬೇಕು’ ಎಂದು ಕರ್ನಾಟಕ ಮಾದಿಗರ ಸಂಘದ ಅಧ್ಯಕ್ಷ ದೇವರಾಜ ಅರಸು ತಿಳಿಸಿದರು.

ನಗರದ ರಾಕಂಗೇರಾದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಕರ್ನಾಟಕ ಮಾದಿಗರ ಸಂಘ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಳಮಟ್ಟದ ಪ್ರಗತಿಗೆ ಪೂರಕವಾದ ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನಮಾನ ಅತ್ಯಂತ ಮಹತ್ವದ್ದಾಗಿದೆ. ಹಳ್ಳಿ ರಾಜಕೀಯ ಗೆದ್ದ ವ್ಯಕ್ತಿ ದೆಹಲಿ ರಾಜಕೀಯ ಮಾಡಬಲ್ಲರು. ಗ್ರಾಮದಲ್ಲಿ ಎಲ್ಲಾ ಸಮುದಾಯದ ಜೊತೆ ಸೌಹಾರ್ದಯುತವಾಗಿ ಕೂಡಿಕೊಂಡು ನಮ್ಮತನ ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮವರನ್ನು ಸನ್ಮಾನಿಸಿರುವುದು ಉತ್ತಮ ಬೆಳವಣಿಗೆ’ ಎಂದರು.

ಕರ್ನಾಟಕ ಮಾದಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವುಕುಮಾರ ದೊಡ್ಮನಿ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಹಣಮಂತ ಕೃಷ್ಣಪ್ಪ ಮಾದಾರ, ಉಪನ್ಯಾಸಕ ಪಂಡಿತ ನಿಂಬೂರ, ವಸಂತ ಸುರಪುರಕರ್, ನಂದಕುಮಾರ ಬಾಂಬೆ.ಭೀಮಾಶಂಕರ ಬಿಲ್ಲಾವ್.ರಾಜಕುಮಾರ ಬಾಸಿಗಿ, ಪ್ರೇಮಾ ಕಲಕೇರಿ,ಸುನೀಲ ಸಲಗರ.ಶಿವಲಿಂಗಪ್ಪ, ಶಾಂತಪ್ಪ ಗುತ್ತೆದಾರ, ಬಸವರಾಜ ನಾಯ್ಕಲ್, ರುದ್ರಪ್ಪ ಹುಲಿಮನಿ, ವಾಸುದೇವ ಕಟ್ಟಿಮನಿ ಮಲ್ಲಿಕಾರರ್ಜುನ ಗುತ್ತೆದಾರ, ಸುನೀಲ ಹಳಿಸಗರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು