ಭಾನುವಾರ, ನವೆಂಬರ್ 28, 2021
20 °C

₹100 ಗಡಿ ದಾಟಿದ ಡೀಸೆಲ್‌ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ತೈಲ ದರಗಳ ಏರುಮುಖದಲ್ಲಿದ್ದು, ಡೀಸೆಲ್‌ ದರ ಶನಿವಾರ ₹ 100ರ ಗಡಿ ದಾಟಿತು.ಶುಕ್ರವಾರ ಡೀಸೆಲ್‌ ದರ ₹99.93 ಪೈಸೆ ಇತ್ತು. ಶನಿವಾರ ಸರಾಸರಿ ₹37 ಪೈಸೆ ಏರಿಕೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪೆಟ್ರೋಲ್‌ ದರ ಲೀಟರ್‌ಗೆ ₹109.51 ಮತ್ತು ಡೀಸೆಲ್‌ ದರ ₹100.34, ಭಾರತ ಪೆಟ್ರೋಲಿಯಂ (ಬಿಪಿ) ಪೆಟ್ರೋಲ್‌ ದರ ಲೀಟರ್‌ಗೆ ₹109.5, ಡೀಸೆಲ್‌ ದರ ₹100.34 ಆಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) ಪೆಟ್ರೋಲ್‌ ದರ ₹109.44 ಮತ್ತು ಡೀಸೆಲ್‌ ದರ ₹100.28 ಇದೆ.

‘ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಜನಸಮಾನ್ಯರ ಮೇಲೆ ಪ್ರಭಾವ ಬೀರುತ್ತಿದೆ. ಜೀವನ ಅಸ್ತವ್ಯಸ್ತವಾಗಿದೆ’ ಎಂದು ಮುಸ್ತಾಫ್‌ ಪಟೇಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು