ಯಾದಗಿರಿ: ‘ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವವರು, ಅವಘಡಗಳಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವವರು ದೇವರಿಗೆ ಸಮಾನರು. ನಾವು ಮಾಡುವ ಸೇವೆಯೇ ಧರ್ಮದ ಸೇತುವೆಯಾಗಲಿದೆ’ ಎಂದು ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯ್ಸ ಅಭಿಪ್ರಾಯಪಟ್ಟರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಆಯೋಜಿಸಿದ್ದ ಶೌರ್ಯ ವಿಪತ್ತು ಸಂಯೋಜಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಟ್ರಸ್ಟ್ನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸೇರಿಕೊಂಡು ದೇವಸ್ಥಾನಗಳನ್ನು ಸ್ವಚ್ಛ ಮಾಡಿದ್ದರಿಂದ ಸುತ್ತಲಿನ ಜನರು ಸ್ವಯಂಸೇವಕರನ್ನು ಪ್ರಶಂಸಿಸಿದ್ದಾರೆ. ನಮ್ಮ ತಂಡಕ್ಕೆ ಸೇರಿದ ಮೇಲೆ ಸಮಾಜಕ್ಕೆ ಸೇರಿದವರು ಎಂಬ ದೃಷ್ಟಿಯಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಅವಘಡಕ್ಕೆ ಒಳಗಾಗದ ರೀತಿಯಲ್ಲಿ ಶೌರ್ಯ ತಂಡವನ್ನು ಸಿದ್ಧಪಡಿಸಬೇಕಿದೆ’ ಎಂದರು.

‘ವಿಪತ್ತುಗಳು ಸಂಭವಿಸಿದಾಗ ತಕ್ಷಣಕ್ಕೆ ರಾಜ್ಯ, ರಾಷ್ಟ್ರಮಟ್ಟದ ತಂಡಗಳು ಬಂದು ರಕ್ಷಿಸಲು ಆಗುವುದಿಲ್ಲ. ವಿಪತ್ತಿನಲ್ಲಿ ಇರುವವರಿಗೆ ತಕ್ಷಣವೇ ಸ್ಥಳೀಯವಾಗಿ ಸ್ಪಂದನೆ ಸಿಗುವಂತೆ ಮಾಡಲು ಶೌರ್ಯ ಪಡೆ ರಚನೆ ಮಾಡಲಾಗಿದೆ. ಸೇವಾ ಕಾರ್ಯದಲ್ಲಿ ಗುಣಮಟ್ಟ ಹೆಚ್ಚಾಗಿ, ಸಾಮಾಜಿಕವಾಗಿ ಗುರುತಿಸಿಕೊಳ್ಳುವಂತೆ ಆಗಬೇಕಿದೆ’ ಎಂದು ಹೇಳಿದರು.

ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಜಯವಂತ ಪಟಗಾರ ಮಾತನಾಡಿ, ‘2019ರಲ್ಲಿ ಬೆಳ್ತಂಗಡಿಯಲ್ಲಿ ಪ್ರಾಯೋಗಿಕವಾಗಿ ಚಾಲನೆಯಾದ ಶೌರ್ಯ ಸಮಿತಿ, 91 ತಾಲ್ಲೂಕುಗಳಿಗೆ ವಿಸ್ತರಿಸಿಕೊಂಡಿದೆ. 10470 ಸ್ವಯಂ ಸೇವಕರು, 604 ಘಟಕಗಳು ಸಕ್ರಿಯವಾಗಿ ನಡೆಯುತ್ತಿವೆ.
ಪಂಚ ಸೂತ್ರ ಅಧಾರದಲ್ಲಿ ಸೇವೆಗಳು ನಡೆಯುತ್ತವೆ. 10,460 ಸ್ವಯಂಸೇವಕರಿದ್ದಾರೆ. ಅಗ್ನಿಶಾಮಕ, ಎನ್ಡಿಆರ್ಎಪ್ ತಂಡಗಳು ತರಬೇತಿ ನೀಡಿವೆ’ ಎಂದರು.

ಯಾದಗಿರಿ, ಚಿತ್ತಾಪುರ ಹಾಗೂ ಜೇವರ್ಗಿ ತಾಲ್ಲೂಕುಗಳ ಸ್ವಯಂಸೇವಕರಿಗೆ ಬ್ಯಾಗ್, ಪರಿಕರಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ವಸಂತ್ ಗೌಡ, ಯೋಜನಾಧಿಕಾರಿಗಳಾದ ಮಂಜುನಾಥ್, ರಾಜೇಶ್, ಶ್ರೀಕಾಂತ್, ದಿನೇಶ್, ಗುರುರಾಜ್, ಕೃಷಿ ಮೇಲ್ವಿಚಾರಕ ಶರಣು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.