ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನುಗ್ಗೆಕಾಯಿ ದುಬಾರಿ, ಗ್ರಾಹಕರ ಜೇಬಿಗೆ ಹೊರೆ

ಸೊಪ್ಪುಗಳ ದರ ಸ್ಥಿರ, ಕೆಲ ತರಕಾರಿ ಬೆಲೆಯಲ್ಲಿ ಏರಿಕೆ
Last Updated 20 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಯಾದಗಿರಿ: ನುಗ್ಗೆಕಾಯಿ ದರ ಗಗನಕ್ಕೇರಿದ್ದು, ನುಗ್ಗೆಕಾಯಿ ಪ್ರಿಯರ ಜೇಬಿಗೆ ಬಿಸಿ ತಟ್ಟಿದೆ. ಉಳಿದಂತೆ ದೊಣ್ಣೆ ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಹೀರೆಕಾಯಿ ತರಕಾರಿಗಳು ಕಳೆದ ವಾರಕ್ಕಿಂತ ₹ 5ರಿಂದ 10ರವರೆಗೆ ಏರಿಕೆಯಾಗಿದೆ. ಉಳಿದ ತರಕಾರಿಗಳ ದರದಲ್ಲಿ ಯಥಾಸ್ಥಿತಿ ಇದೆ.

ನುಗ್ಗೆಕಾಯಿ ಕೆ.ಜಿ.ಗೆ ₹ 300 ಆಗಿದ್ದರೆ, ಉಳಿದ ತರಕಾರಿ ಬೆಲೆ ಕೆ.ಜಿ.ಗೆ ₹ 80–90ರವರೆಗೆ ಇದೆ.

ಸದ್ಯ ಮದುವೆ ಋತುವಾಗಿದ್ದು, ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದ್ದು, ನುಗ್ಗೆಕಾಯಿ ವರ್ಷ ಪೂರ್ತಿ ಬೆಲೆಯಲ್ಲಿ ಏರಿಕೆ ಕಂಡಿದೆ. ಬೇಸಿಗೆಯಲ್ಲಿ ಕೆ.ಜಿ.ಗೆ ₹ 200, ಮಳೆಗಾಲದಲ್ಲಿ ₹ 350ರಿಂದ ₹400ರ ತನಕ ದರ ತಲುಪಿತ್ತು. ಮತ್ತೆ ಈಗ ₹ 300ಕ್ಕೆ ಏರಿದೆ.

ಈರುಳ್ಳಿ, ಟೊಮೆಟೊ, ಬೀನ್ಸ್, ಗಜ್ಜರಿ ಬೆಲೆ ಕೆ.ಜಿ.ಗೆ ಕಳೆದ ವಾರಕ್ಕಿಂತ ₹ 5–10 ಇಳಿಕೆಯಾಗಿದೆ. ಆಲೂಗಡ್ಡೆ, ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೋರೆಕಾಯಿ, ಬಿಟ್‌ರೂಟ್, ಹಾಗಲಕಾಯಿ, ತೊಂಡೆಕಾಯಿ, ಅವರೆಕಾಯಿ ದರ ಸ್ಥಿರವಾಗಿದೆ. ಮಾರುಕಟ್ಟೆಯಲ್ಲಿ ಹಸಿಬಟಾಣಿ ಆವಕ ಹೆಚ್ಚಿದ್ದು, ಕೆ.ಜಿ.ಗೆ ₹ 60–70 ಇದೆ. ವಾರದಲ್ಲಿ ಎರಡು ದಿನ ಹೊರ ಜಿಲ್ಲೆಗಳಿಂದ ಗೆಣಸು ಆವಕವಿದ್ದು, ಕೆ.ಜಿ.ಗೆ ₹ 50–60 ದರವಿದೆ.

ಸೊಪ್ಪುಗಳ ದರ ಸ್ಥಿರ: ಸೊಪ್ಪುಗಳ ದರ ಈ ಬಾರ ಯಥಾಸ್ಥಿತಿಯಿದ್ದು, ಮೆಂತ್ಯ, ಸಬ್ಬಸಗಿ, ಪಾಲಕ, ಪುಂಡಿ ಪಲ್ಯ, ದೊಡ್ಡ ಗಾತ್ರದ ರಾಜಗಿರಿ ಸೊಪ್ಪು ಒಂದು ಕಟ್ಟಿಗೆ ₹ 10, ಸಣ್ಣ ಗಾತ್ರ ಒಂದು ಕಟ್ಟು ₹ 5 ದರವಿದೆ. ಕೊತ್ತಂಬರಿ ₹ 15–20 ಒಂದು ಕಟ್ಟು, ಪುದೀನಾ ₹ 15–20 ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ.

ಕರಿಬೇವು ₹ 90–100 ಕೆ.ಜಿ., ಬೆಳ್ಳುಳ್ಳಿ ಕೆ.ಜಿಗೆ ₹ 100–120, ಶುಂಠಿ ಕೆ.ಜಿ.ಗೆ ₹ 80–90 ದರ ಸ್ಥಿರವಾಗಿದೆ. ನಿಂಬೆಹಣ್ಣು ₹ 10 ಗೆ ನಾಲ್ಕು ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ತುಟ್ಟಿಯಾಗುವ ಸಾಧ್ಯತೆಯಿದೆ.

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ;20–25

ಆಲೂಗಡ್ಡೆ;30–35

ಈರುಳ್ಳಿ;30–35
ಬದನೆಕಾಯಿ;50–60
ಬೆಂಡೆಕಾಯಿ;40–50
ದೊಣ್ಣೆಮೆಣಸಿನಕಾಯಿ;60–70
ಎಲೆಕೋಸು;50–60
ಹೂಕೋಸು;50–60
ಚವಳೆಕಾಯಿ;60–70
ಬೀನ್ಸ್; 50–60
ಗಜ್ಜರಿ;50-60
ಸೌತೆಕಾಯಿ; 50–60
ಮೂಲಂಗಿ;40-50
ಮೆಣಸಿನಕಾಯಿ;50-60
ಸೋರೆಕಾಯಿ;40–50
ಬಿಟ್‌ರೂಟ್;60-70
ಹೀರೆಕಾಯಿ;60-70
ಹಾಗಲಕಾಯಿ;60-70
ತೊಂಡೆಕಾಯಿ;40-50
ಅವರೆಕಾಯಿ;50–60

ತರಕಾರಿ, ಸೊಪ್ಪುಗಳ ದರ ಬಹುತೇಕ ಸ್ಥಿರವಾಗಿದ್ದು, ನುಗ್ಗೆಕಾಯಿ ದರ ಮಾತ್ರ ಹೆಚ್ಚಿದೆ.
ವಿಶ್ವ ಯದ್ಲಾಪುರ, ತರಕಾರಿ ವ್ಯಾಪಾರಿ

ಸದ್ಯ ಮದುವೆ ಋತು ಆರಂಭವಾಗಿದ್ದು, ತರಕಾರಿ, ಸೊಪ್ಪುಗಳ ದರದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.
ಸಿದ್ದು ಹುಲಕಲ್ಲ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT