ಸುರಪುರ: ‘ಎಬಿವಿಪಿ ನಮ್ಮ ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ. 1949 ರಲ್ಲಿ ಆರಂಭವಾಯಿತು. ಸ್ವಾಮಿ ವಿವೇಕಾನಂದ ಅವರ ಆದರ್ಶಗಳ ಮೇಲೆ ರಾಷ್ಟ್ರೀಯ ಪುನರ್ ನಿರ್ಮಾಣಕ್ಕಾಗಿ ಈ ಸಂಘಟನೆ ಕಾರ್ಯನಿರ್ವಹಿಸುತ್ತಿದೆ’ ಎಂದು ಎಬಿವಿಪಿ ರಾಜ್ಯ ಸಮಿತಿ ಉಪಾಧ್ಯಕ್ಷ ಉಪೇಂದ್ರನಾಯಕ ಸುಬೇದಾರ ಹೇಳಿದರು.

ನಗರದ ಪ್ರಭು ಮತ್ತು ಬೋಹ್ರಾ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಎಬಿವಿಪಿ ನಗರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಯಶವಂತರಾವ ಕೇಳ್ಕರ್ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಬೆಳೆದ ಎಬಿವಿಪಿ ವಿದ್ಯಾರ್ಥಿಗಳ ಸಮಸ್ಯೆಗಳಾದ ಶಿಕ್ಷಣದ ವ್ಯಾಪಾರೀಕರಣ, ಭ್ರಷ್ಟಾಚಾರ, ರಾಷ್ಟ್ರೀಯ ಏಕತೆ, ಸಾಮಾಜಿಕ ಅರಿವು ಮೂಡಿಸಲು ಶ್ರಮಿಸುತ್ತಿದೆ’ ಎಂದರು.

‘ಕಳೆದ ಹಲವಾರು ವರ್ಷಗಳಿಂದ ಎಬಿವಿಪಿ ತಾಲ್ಲೂಕಿನ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂಧಿಸಿದೆ. ಬೀದಿಗಿಳಿದು ಹೋರಾಟ ಮಾಡಿದೆ. ವಸತಿ ನಿಲಯಗಳ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆ ಹರಿಸಿದೆ’ ಎಂದರು.

ಉಪನ್ಯಾಸಕರಾದ ವಿರುಪಾಕ್ಷಿ, ಪ್ರಶಾಂತ ಪಾಟೀಲ, ಶರಣುನಾಯಕ, ರಾಜಪ್ಪ ಅಜ್ಜಕೊಲ್ಲಿ, ರಾಜೇಶ್ವರಿ ಉಪಸ್ಥಿತರಿದ್ದರು.

ಮೇಘನಾ ಸ್ವಾಗತಿಸಿದರು. ರಾಜಪ್ಪ ನಿರೂಪಿಸಿದರು. ದೀಪಿಕಾ ವಂದಿಸಿದರು.

ಇದೇ ಸಂದರ್ಭದಲ್ಲಿ ಎಬಿವಿಪಿ ನಗರ ಘಟಕದ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ನೇಮಕ ಮಾಡಲಾಯಿತು.

ಅಮರೇಶ ಚಿಲ್ಲಾಳ (ಅಧ್ಯಕ್ಷ), ಚಂದ್ರಕಲಾ (ಉಪಾಧ್ಯಕ್ಷೆ), ದೇವರಾಜ ನಾಟೇಕಾರ (ಪ್ರಮುಖ), ರಾಜು ಕರಡಕಲ್ (ಸಹ ಪ್ರಮುಖ), ಮಹೇಶ (ಕಾರ್ಯದರ್ಶಿ), ಫಾತಿಮಾ (ತಾಲ್ಲೂಕು ವಿದ್ಯಾರ್ಥಿ ಪ್ರಮುಖೆ), ಈರಮ್ಮ, ದೇವರಾಜ, ಮೌನೇಶ, ಮಹೇಶ, ನರಸಿಂಹ, ಶಮೀನಾ, ರಾಧಿಕಾ, ರಂಜಿತಾ, ದೇವಮ್ಮ, ಸುನೀಲ ರಾಠೋಡ, ದಿಪೀಕಾ (ಕಾರ್ಯಕಾರಿ ಸದಸ್ಯರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.