ಬುಧವಾರ, ಮಾರ್ಚ್ 29, 2023
25 °C

ಸುರಪುರ: ರೈತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ತಾಲ್ಲೂಕಿನ ಕೋನ್ಹಾಳ ಗ್ರಾಮದ ರೈತ ಈರಪಣ್ಣಗೌಡ ಮಲ್ಲಣ್ಣ ರೋಡಲಬಂಡಿ (24) ಅವರು ಗುರುವಾರ ಮಧ್ಯರಾತ್ರಿ ನಗರದ ಪ್ರಭು ಕಾಲೇಜಿನ ಮೈದಾನದ ಬೇವಿನಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋನ್ಹಾಳ ಗ್ರಾಮದಲ್ಲಿ 5 ಎಕರೆ 21 ಗುಂಟೆ ಜಮೀನು ಹೊಂದಿದ್ದ ಅವರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ₹5 ಲಕ್ಷ ಮತ್ತು ₹5 ಲಕ್ಷ ಕೈ ಸಾಲ ಮಾಡಿದ್ದರು. ಬೆಳೆ ಹಾನಿಯಾಗಿತ್ತು ಎಂದು ಅವರು ನೊಂದಿದ್ದರು ಎಂದು ಈರಪಣ್ಣಗೌಡ ಪತ್ನಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು