ಬುಧವಾರ, ಮಾರ್ಚ್ 22, 2023
22 °C

ಬೈಲಾಪುರ: ಸಾಲಭಾದೆಗೆ ರೈತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ಬೈಲಾಪುರ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾಲದಂಡಪ್ಪ ಹಣಮಂತ್ರಾಯ ಬಿರಾದಾರ್(45) ಸಾವನ್ನಪ್ಪಿದವರು. ಬುಧವಾರ ಮಧ್ಯಾಹ್ನ ತಮ್ಮ ಜಮೀನಿಗೆ ತೆರಳಿದ್ದ ಹಣಮಂತ್ರಾಯ, ಕ್ರಿಮಿನಾಶಕ ಸೇವಿಸಿದರು. ಬಳಿಕ ಕುಟುಂಬಸ್ಥರು ಹುಣಸಗಿಯ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಮೃತ ರೈತನಿಗೆ 2 ಎಕರೆ ಜಮೀನು ಇದ್ದು, ಬ್ಯಾಂಕ್‌ ಸೇರಿದಂತೆ ಕೈಗಡ ಸಾಲ ಮಾಡಿದ್ದರು. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು