ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ. ಅದರ ಬೆನ್ನಲ್ಲೆ ರಸಗೊಬ್ಬರದ ಬೇಡಿಕೆ ಹೆಚ್ಚಾಗುತ್ತಲಿದೆ. ರಸಗೊಬ್ಬರ ಅಂಗಡಿ ಮುಂದೆ ರೈತರು ಸಾಲುಗಟ್ಟಿ ನಿಂತು ಪಡೆಯುತ್ತಿದ್ದಾರೆ. ಸದ್ಯಕ್ಕೆ ಸಮಸ್ಯೆ ಕಾಣುತ್ತಿಲ್ಲ. ಹೆಚ್ಚಿನ ಬೇಡಿಕೆ ಶುರುವಾಗುತ್ತಿದ್ದಂತೆ ಅಭಾವ ಸೃಷ್ಟಿಯಾಗುವ ಭೀತಿ ರೈತರಲ್ಲಿ ಕಾಡುತ್ತಲಿದೆ.

‘ತಾಲ್ಲೂಕಿಗೆ ಅಗತ್ಯ ಪ್ರಮಾಣದ ರಸಗೊಬ್ಬರದ ಬೇಡಿಕೆಯನ್ನು ಸಲ್ಲಿಸಲಾಗಿದೆ. ಅದರಂತೆ 1,500 ಟನ್ ಸಂಗ್ರಹ ಇದೆ. ಇನ್ನೂ 800 ಟನ್ ಬರಲಿದೆ. ನಾವು ಒಂದು ಎಕರೆಗೆ 2 ಚೀಲದಂತೆ ಬೇಡಿಕೆ ಸಲ್ಲಿರುತ್ತೇವೆ. ಆದರೆ ರೈತರು ಎಕರೆಗೆ 4-5ಚೀಲ ಬಳಕೆ ಮಾಡುತ್ತಾರೆ. ಆಗ ನಮ್ಮ ಅಂದಾಜು ಉಲ್ಟಾಪಲ್ಟಾ ಆಗುತ್ತದೆ. ರೈತರು ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಉಪಯೋಗಿಸಿದರೆ ಯಾವುದೆ ಸಮಸ್ಯೆ ಉದ್ಭವಿಸದು. ರೈತರಿಗೆ ಈಗಾಗಲೇ ನಾವು ಡಿಎಪಿ ರಸಗೊಬ್ಬರದ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ನ್ಯಾನೊ ಯೂರಿಯಾ ಬಳಕೆ ಮಾಡಲು ಮನವಿ ಮಾಡಿದ್ದರೂ ರೈತರು ಅದಕ್ಕೆ ಒಪ್ಪುತ್ತಿಲ್ಲ ಎನ್ನುತ್ತಾರೆ’ ಕೃಷಿ ಇಲಾಖೆ ಅಧಿಕಾರಿ

ಪ್ರಸಕ್ತ ಬಾರಿ ತಾಲ್ಲೂಕಿನಲ್ಲಿ ಹತ್ತಿ ಬಿತ್ತನೆ ಜಾಸ್ತಿಯಾಗಿದೆ. ನೀರಾವರಿ ಹಾಗೂ ಒಣಬೇಸಾಯದ ಜಮೀನುಗಳಲ್ಲಿ ತೊಗರಿ ಬೆಳೆಯ ಜಾಗದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಸದ್ಯಕ್ಕೆ ಬೆಳೆ ಉತ್ತಮವಾಗಿವೆ ಎನ್ನುತ್ತಾರೆ ಹತ್ತಿ ಬಿತ್ತನೆ ಮಾಡಿದ ರೈತ ಶರಣಪ್ಪ.

ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ರೈತರು ನಾಲ್ಕು ಪಟ್ಟು ಹೆಚ್ಚು ರಸಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಉಲ್ಟಾಪಲ್ಟಾ ಆಗುತ್ತಲಿದೆ. ಇನ್ನೂ ರಸಗೊಬ್ಬರ ಬರಲಿದೆ
– ಸುನಿಲಕುಮಾರ ಯರಗೊಳ ಎ.ಡಿ ಶಹಾಪುರ

ಜೂನ್ ಕೊರತೆ ಜುಲೈ ಉತ್ತಮ

ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಶೇ 42ರಷ್ಟು ಮಳೆ ಕೊರತೆ ಅನುಭವಿಸಿದ ರೈತರು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಾಯುಭಾರ ಕುಸಿತದಿಂದ ಐದು ದಿನ ಜಿಟಿ ಜಿಟಿ ಮಳೆ ಹಾಗೂ ಆಗಾಗ ಸುರಿದ ಅಬ್ಬರದ ಮಳೆ ರೈತರ ಕೈ ಹಿಡಿದಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತಿದೆ. ಇವೆಲ್ಲದರ ನಡುವೆ ಇನ್ನೂ ಶೇ 16ರಷ್ಟು ಮಳೆ ಕೊರತೆ ಇದೆ ಎನ್ನುತ್ತಾರೆ ಕೃಷಿ ಇಲಾಖೆಯ ಮೂಲಗಳು.

ಮಳೆಗೆ 9 ಮನೆ ಕುಸಿತ

ತಾಲ್ಲೂಕಿನಲ್ಲಿ ಐದಾರು ದಿನದಿಂದ ಜಿಟಿ ಜಿಟಿ ಮಳೆಯಿಂದ ತಾಲ್ಲೂಕಿನಲ್ಲಿ ಒಟ್ಟು 9 ಮನೆ ಕುಸಿತವಾಗಿವೆ. ಅದರಲ್ಲಿ ಸಗರ ಹಾಗೂ ದೋರನಹಳ್ಳಿ ಹೋಬಳಿ ಸೇರಿಕೊಂಡಿವೆ. ಮೇಲಧಿಕಾರಿಗೆ ವರದಿ ನೀಡಲಾಗಿದೆ. ಉಳಿದಂತೆ ಯಾವುದೇ ಹಾನಿಯಾಗಿಲ್ಲ ಎಂದು ತಹಶೀಲ್ದಾರ ಸಿದ್ದಾರೂಢ ಬನ್ನಿಕೊಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಾಂತ ರೈತ ಸಂಘದ ಪ್ರತಿಭಟನೆ

ಶಹಾಪುರ: ತಾಲ್ಲೂಕಿನ ಕೆಲ ರಸಗೊಬ್ಬರ ಅಂಗಡಿಯಲ್ಲಿ ಮಾತ್ರ ಅಧಿಕ ಪ್ರಮಾಣದ ರಸಗೊಬ್ಬರ ದಾಸ್ತಾನು ಇದೆ. ಕೃತಕ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಂಚು ವ್ಯಾಪಾರಸ್ಥರು ನಡೆಸಿದ್ದಾರೆ. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಶನಿವಾರ ಪ್ರಾಂತ ರೈತ ಸಂಘದ ಮುಖಂಡರು ನಗರದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಭೀಮರಾಯ ಪೂಜಾರಿ ದಾವಲಸಾಬ್ ನದಾಫ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.