ಭಾನುವಾರ, ಜೂನ್ 20, 2021
20 °C

ಸುರಪುರ ತಾಲ್ಲೂಕಿನ ದೇವಿಕೇರಾದಲ್ಲಿ ಬೆಂಕಿಗೆ ಮನೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಬುಧವಾರ ಶಾರ್ಟ್ ಸರ್ಕಿಟ್‍ನಿಂದ ಮನೆ ಬೆಂಕಿಗೆ ಆಹುತಿಯಾಗಿದೆ.

ಮನೆಯಲ್ಲಿಟ್ಟಿದ್ದ 5 ತೊಲೆ ಬಂಗಾರ,  ಅರ್ಧ ಕೆ.ಜಿ ಬೆಳ್ಳಿ, 8.50 ಲಕ್ಷ ನಗದು ಹಣ ಹಾಗೂ ದವಸ ಧಾನ್ಯ ಬಟ್ಟೆ ಬರೆ ಸೇರಿದಂತೆ ದಿನಬಳಕೆ ಅಗತ್ಯ ಸಾಮಗ್ರಿಗಳು ಸುಟ್ಟು ಕರಕಲಾಗಿ ಹೋಗಿವೆ.

ಮನೆಯ ಮಾಲೀಕ ಇಮಾಮಸಾಬ ದಾವಲಸಾಬ ದೊಡ್ಮನಿ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ಆ ಸಮಯದಲ್ಲಿ ಶಾರ್ಟ್ ಸರ್ಕಿಟ್‍ನಿಂದ ಮನೆಗೆ ಬೆಂಕಿ ತಗಲಿದೆ ಎನ್ನಲಾಗಿದೆ.

10 ಕ್ವಿಂಟಾಲ್ ಜೋಳ, 2 ಚೀಲ ಸಜ್ಜಿ, 6 ಚೀಲ ಅಕ್ಕಿ, ಗೋಧಿ ಎಲ್ಲವು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಗ್ರೇಡ್ 2 ತಹಶೀಲ್ದಾರ್ ಸೋಫಿಯಾ ಸುಲ್ತಾನ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು