ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ಕಳಪೆ ಆಹಾರ: ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ತರಾಟೆ

Last Updated 11 ಜೂನ್ 2020, 6:16 IST
ಅಕ್ಷರ ಗಾತ್ರ
ADVERTISEMENT
""

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನ್ಯಾಯಬೆಲೆ ಅಂಗಡಿಗಳಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಭೇಟಿ ನೀಡಿ ಗ್ರಾಹಕರಿಗೆ ವಿತರಿಸುವ ಆಹಾರ ಧಾನ್ಯಗಳಾದ ಅಕ್ಕಿ, ತೊಗರಿ ಬೇಳೆ,ಗೋಧಿ ಕಾಳುಗಳ ಗುಣಮಟ್ಟವನ್ನು ಪರೀಕ್ಷಿಸಿದರು.

ವಾರ್ಡ್‌ ಸಂಖ್ಯೆ 4ರ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಕ್ರಂ.ಸಂಖ್ಯೆ 144 ಕ್ಕೆ ಭೇಟಿ ನೀಡಿ, ಗ್ರಾಹಕರಿಗೆ ವಿತರಿಸಲಾಗುತ್ತಿದ್ದ ಕಳಪೆ ಗುಣಮಟ್ಟ ತೊಗರಿ ಬೇಳೆ ಕೈಯಲ್ಲಿ ಹಿಡಿದು ಆಹಾರ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. 'ನಿಮ್ಮ ಪತ್ನಿ, ಮಕ್ಕಳಿಗೆ ಇಂಥ ಬೇಳೆಯನ್ನೆ ತಿನ್ನಲು ಕೊಡುತ್ತೀರಾ ಎಂದು ಪ್ರಶ್ನಿಸಿದರು?.

ಕೂಡಲೇ ಕಳಪೆ ಗುಣಮಟ್ಟದ ತೊಗರಿ ಬೇಳೆಯನ್ನು ಕೊಡುವುದು ನಿಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸ್ಥಳದಲ್ಲಿದ್ದ ಗ್ರಾಹಕರ ಜೊತೆ ಮಾತನಾಡುತ್ತಾ ಆಹಾರ ಪದಾರ್ಥಗಳ ಕುರಿತು ಮಾಹಿತಿ ಪಡೆದರು.

ನಾಯ್ಯಬೆಲೆ ಅಂಗಡಿ ಕ್ರಂ.ಸಂಖ್ಯೆ 14 ಮಾಲಿಕ ಹಾಜೀಮಿಯ ಮುಸ್ಥಾಜಿರ್, ಕೃಷಿ ವ್ಯವಸಾಯ ಸಹಕಾರಿ ಸಂಘದ ಕಾರ್ಯದರ್ಶಿ ನಿಂಗಣ್ಣ ಅಲ್ಲಿಪುರ, ಅಧ್ಯಕ್ಷ ಚಂದ್ರಪ್ಪ ಇದ್ಲಿ, ಸದಸ್ಯ ಸುಭಾಸ್ ಕೋಳಿ ಇದ್ದರು.

ಸಚಿವ ಗೋಪಾಲಯ್ಯ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT