ಯಾದಗಿರಿ: ಪತಂಜಲಿ ಯೋಗ ಸಮಿತಿ ಅಧ್ಯಕ್ಷರೂ ಆಗಿರುವ ಯೋಗ ಗುರು ಅನಿಲ್ ಗುರೂಜಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಳೆದ 11 ವರ್ಷಗಳಿಂದ ಯೋಗವನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 7.30ರ ತನಕ ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಯೋಗಾಸನ ಹೇಳಿಕೊಡಲಾಗುತ್ತಿದೆ. ಈ ಹನ್ನೊಂದು ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರು ಯೋಗಾಸನ ಕಲಿತುಕೊಂಡಿದ್ದಾರೆ. ಈಗ ಸ್ವತಃ ಅವರೇ ಮನೆಗಳಲ್ಲಿ, ವಾಕಿಂಗ್ ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

ಹಳ್ಳಿಗಳಲ್ಲಿ ಶಿಬಿರ: ಕೊರೊನಾ ಬರುವುದಕ್ಕಿಂತ ಮುಂಚೆ ಹಳ್ಳಿಗಳಲ್ಲಿ ಯೋಗ ಶಿಬಿರ ಹಮ್ಮಿಕೊಂಡು ಗ್ರಾಮಸ್ಥರಿಗೆ ಯೋಗದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಅನಿಲ್ ಗುರೂಜಿ ಮಾಡಿಕೊಂಡು ಬರುತ್ತಿದ್ದಾರೆ.

‘ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಒಂದು ವಾರ ಕಾಲ ಯೋಗ ಕಲಿಸಿಕೊಡಲಾಗುತ್ತಿತ್ತು. ಯಾರೂ ಚೆನ್ನಾಗಿ ಕಲಿತುಕೊಂಡಿರುತ್ತಾರೊ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಮುಂದಿನ ಹಳ್ಳಿಗಳಿಗೆ ತೆರಳುತ್ತಿದ್ದೀವಿ. ಸುಮಾರು 20ರಿಂದ 25 ಹಳ್ಳಿಗಳಲ್ಲಿ ತರಬೇತಿ ಶಿಬಿರ ಮಾಡಲಾಗಿದೆ. ಈಗ ಕೊರೊನಾ ಬಂದಾಗಲಿಂದ ಹಳ್ಳಿಗಳಿಗೆ ತೆರಳುವುದನ್ನು ನಿಲ್ಲಿಸಿದ್ದೇವೆ. ಈಗ ನಗರ ಪ್ರದೇಶದಲ್ಲಿ ಮಾತ್ರ ಯೋಗ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಅನಿಲ್ ಗುರೂಜಿ.

ರೋಗಕ್ಕೆ ಅನುಗುಣವಾಗಿ ಯೋಗ: ಯೋಗವನ್ನು ಉತ್ತಮ ಆರೋಗ್ಯಕ್ಕಾಗಿ ಮಾಡಬೇಕಾಗುತ್ತದೆ. ಆದರೆ, ವಿವಿಧ ಕಾಯಿಲೆಗಳಿಂದ ಬಳಲುವವರಿಗೆ ಆಯಾ ಕಾಯಿಲೆಗೆ ಅನುಗುಣವಾಗಿ ಯೋಗಾಭ್ಯಾಸ ಮಾಡಿಸಬೇಕಾಗುತ್ತದೆ.

‘ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಈಗಿನ ಸಂದರ್ಭದಲ್ಲಿ ಆಮ್ಲೀಯತೆ (ಆ್ಯಸಿಡಿಟಿ), ಅಜೀರ್ಣ, ಹೃದಯಾಸ್ತಂಭನ, ಸೊಂಟನೋವು ಇನ್ನಿತರ ಕಾಯಿಲೆಗಳಿಗೆ ತಕ್ಕಂತೆ ಯೋಗ ತರಬೇತಿ ಮಾಡಿಸಲಾಗುತ್ತಿದೆ. ಕೊರೊನಾ ವೇಳೆ ಪ್ರಾಣಾಮಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎನ್ನುತ್ತಾರೆ ಯೋಗ ಗುರು ಅನಿಲ್ ಗುರೂಜಿ.

ಇಂದು ಲುಂಬಿನಿ ವನದಲ್ಲಿ ‘ಯೋಗ’

ನಗರದ ಲುಂಬಿನಿ ವನದಲ್ಲಿ ಜೂನ್ 21 ರಂದು ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಯುಕ್ತ ‘ಯೋಗದೊಂದಿಗೆ ಮನೆಯಲ್ಲಿರಿ’ ಎಂಬ ಘೋಷ ವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ.

ಯೋಗ ಗುರು ಅನಿಲ್ ಗುರೂಜಿ ನೇತೃತ್ವದಲ್ಲಿ ಯೋಗ ಮಾಡಿಸಲಾಗುತ್ತಿದೆ. ಈ ಮೂಲಕ ಯೋಗ ದಿನಕ್ಕೆ ಚಾಲನೆ ನೀಡಲಾಗುತ್ತಿದೆ. ಕಳೆದ ಒಂದು ವಾರದಿಂದ ಯೋಗ ತರಬೇತಿ ನಡೆಯುತ್ತಿದೆ. ಆಯುಷ್ ಇಲಾಖೆ ಮನೆಯಿಂದಲೇ ಯೋಗ ಮಾಡಿ ಎಂದು ಸೂಚಿಸಿದೆ. ಆದರೆ, ಸಾಂಕೇತಿಕವಾಗಿ ಯೋಗ ಮಾಡಲಾಗುತ್ತಿದೆ.

ಕೊರೊನಾ ಸಂದರ್ಭದಲ್ಲಿ ಯೋಗಕ್ಕೆ ಪ್ರಮುಖ್ಯತೆ ಬಂದಿದೆ. ಶ್ವಾಸಕೋಶ ಶುದ್ಧವಾಗಿಟ್ಟುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗದಿಂದ ರೋಗನಿರೋಧಕ ಶಕ್ತಿ, ಸ್ವಾಸ್ಥ್ಯ ಜೀವನ ನಡೆಸಲು ಸಾಧ್ಯ

- ಅನಿಲ್ ಗುರೂಜಿ, ಯೋಗ ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.