ಯಾದಗಿರಿ: ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು ಹತ್ತು ಜನರನ್ನು ಬಂಧಿಸಿ ಜೂಜಾಟಕ್ಕಿಟ್ಟಿದ್ದ ₹18,390 ನಗದುವಶಪಡಿಸಿಕೊಂಡ ಘಟನೆ ಗುರುಮಠಕಲ್ನಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಎಪಿಎಂಸಿ ಹತ್ತಿರದ ಖುಲ್ಲಾ ಜಾಗದಲ್ಲಿ ಜೂಜಾಟ ಆಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ಮಾಡಿದ ಪಿಐ ವೀರಣ್ಣ ದೊಡ್ಡಮನಿ ನೇತೃತ್ವದ ತಂಡ ಜೂಜುಕೋರರನ್ನು ಬಂಧಿಸಿ, ಹಣ ಜಪ್ತಿ ಮಾಡಿದೆ.

ರವಿಕುಮಾರ ಕೊಟಕುಂಡಾ, ಪಿತಾಂಬರ ಕಾಟಿಗ, ರಾಜೇಶ, ಶರಣಪ್ಪ, ತುಳಸಿರಾಂ ರಾಠೋಡ್, ಶಿವಕುಮಾರ, ಭಾಸ್ಕರ್, ರಾಮು ರಾಠೋಡ್, ಪ್ರಕಾಶ ನಿರೇಟಿ ಮತ್ತು ಬಾಲಪ್ಪ ನಿರೇಟಿ ಎಂಬುವವರೇ ಜೂಜಾಟದಲ್ಲಿ ತೊಡಗಿದ್ದರು. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿಗೆ ಗುರುಮಠಕಲ್ ಪಟ್ಟಣ ಸೇರಿದಂತೆಯೇ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜೂಜಾಟ ಮತ್ತು ಮಟಕಾ ಹಾವಳಿ ಜಾಸ್ತಿಯಾಗಿದ್ದರ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಈ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.