ಪಟ್ಟಣದಲ್ಲಿ ಸುಮಾರು 20 ರಿಂದ 25 ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಂಡಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಉತ್ತರಾದಿ ಮಠ, ಕಾಡಾ ಕ್ಯಾಂಪ್, ಹಿಲ್‍ಟಾಪ್ ಕಾಲೊನಿ, ಮ್ಯಾಗೇರಿ, ಸಂಜೀವನಗರ, ದೇವೂರ ಬಡಾವಣೆ, ಸಿದ್ದೇಶ್ವರ ದೇವಸ್ಥಾನ, ಲಕ್ಷ್ಮಿ ನಗರ, ಸಾಯಿ ನಗರ ಸೇರಿದಂತೆ ಇನ್ನುಳಿದ ಕೆಲವು ಬಡಾವಣೆ ಸೇರಿದಂತೆ ಹಲವೆಡೆ ವಿವಿಧ ಭಂಗಿಯ ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.