ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಅಧ್ಯಯನ ಮಾಡಿದ್ದೇನೆ. ಇದಕ್ಕೆ ಉಪನ್ಯಾಸಕರು ತಂದೆ ತಾಯಿ ಸಾಥ್ ನೀಡಿದ್ದಾರೆ. ಪರೀಕ್ಷೆಗೆ ತಯಾರಿ ಮಾಡಲು ಆತ್ಮವಿಶ್ವಾಸ ತುಂಬಿದ್ದರು. ಇದು ಪ್ರಥಮ ಬರಲು ಸಹಾಯವಾಗಿದೆ
ರಾಜೇಶ್ವರಿ ಗಣೇಶ, ವಿಜ್ಞಾನ ವಿಭಾಗ
ಪಿಯು ಫಲಿತಾಂಶ ತಂದೆ ತಾಯಿಯ ಆಶೆಯನ್ನು ನೆರವೇರಿಸಿದ ಖುಷಿ ಕೊಟ್ಟಿದೆ. ಉಪನ್ಯಾಸಕರು ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ. ಗ್ರಂಥಾಲಯದಲ್ಲಿ ಓದು ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಗಿದೆ
ನಾಗವೇಣಿ ಶಿವರಾಜರೆಡ್ಡಿ, ವಾಣಿಜ್ಯ ವಿಭಾಗ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಟಾಪ್ ಸ್ಥಾನ ಪಡೆದಿದ್ದಾರೆ. ಆದರೂ ಗ್ರಾಮೀಣ ನಗರದ ವಿದ್ಯಾರ್ಥಿನಿಯರು ಹೆಚ್ಚಿನ ಸ್ಥಾನ ಪಡೆದಿದ್ದಾರೆ
ಸಿ.ಕೆ.ಕುಳಗೇರಿ, ಉಪನಿರ್ದೇಶಕ ಪದವಿ ಪೂರ್ವ ಕಾಲೇಜು
ವಿದ್ಯಾರ್ಥಿನಿಯರು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದ್ದರಿಂದ ಜಿಲ್ಲೆಯಲ್ಲಿ ಹಲವು ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಅವರಿಗೆ ಪ‍್ರೋತ್ಸಾಹ ಸಿಕ್ಕರೆ ಮತ್ತಷ್ಟು ಸಾಧನೆ ಮಾಡುತ್ತಾರೆ