ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಸುಲಭಕ್ಕೆ ದಕ್ಕಿದ ಗ್ರಾ.ಪಂ ಅಧ್ಯಕ್ಷ ಸ್ಥಾನ

ಎಸ್.ಟಿ ಸಮುದಾಯ ಸದಸ್ಯೆಯರಿಗೆ ಒಲಿದು ಬಂದ ಅದೃಷ್ಟ
Published 24 ಜೂನ್ 2023, 5:59 IST
Last Updated 24 ಜೂನ್ 2023, 5:59 IST
ಅಕ್ಷರ ಗಾತ್ರ

ಶಹಾಪುರ: ಎರಡನೇಯ ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

ನೆಪಮಾತ್ರಕ್ಕೆ ರಾಜಕೀಯ ರಹಿತವಾಗಿದ್ದರು ಸಹ ಎಲ್ಲವೂ ಆಯಾ ಪಕ್ಷದ ಹೈ ಕಮಾಂಡ್‌ ಸೂಚಿಸಿದ ವ್ಯಕ್ತಿ ಆಯ್ಕೆಯಾಗುತ್ತಾರೆ. ಇವೆಲ್ಲದರ ನಡುವೆ ಪರಿಶಿಷ್ಟ ಪಂಗಡದ (ಎಸ್.ಟಿ) ಮಹಿಳಾ ಸದಸ್ಯೆಯರಿಗೆ ಅನಾಯಾಸವಾಗಿ ಅಧ್ಯಕ್ಷೆಯ ಗಾದಿ ಒಲಿದು ಬಂದಿದೆ.

ತಾಲ್ಲೂಕಿನ ದೋರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 35 ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಅದರಲ್ಲಿ ಪರಿಶಿಷ್ಟ ಪಂಗಡದ ಏಕೈಕ ಮಹಿಳಾ ಸದಸ್ಯೆ ವಾರ್ಡ್ ನಂ.1ರಲ್ಲಿನ ಚಂದ್ರಕಲಾ ಅಬ್ದುಲಸಾ ದೊರೆ ಆಯ್ಕೆಯಾಗಿದ್ದಾರೆ.

ಪ್ರಸಕ್ತ 2ನೇ ಅವಧಿ ಅಧ್ಯಕ್ಷ ಸ್ಥಾನವು ಎಸ್.ಟಿ. ಮಹಿಳೆಗೆ ಮೀಸಲಾಗಿದೆ. ಚಂದ್ರಕಲಾ ದೊರೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಬಿ.ಎ ಪದವೀಧರರಾಗಿದ್ದು, ಇನ್ನು ಅವಿವಾಹಿತ ಯುವತಿಯಾಗಿದ್ದಾರೆ. ಸಂವಿಧಾನ ಬದ್ಧಹಕ್ಕು ಲಭಿಸಿರುವುದುಕ್ಕೆ ಖುಷಿಯಾಗಿದೆ ಎನ್ನುತ್ತಾರೆ ಚಂದ್ರಕಲಾ ಅವರು.

ತಾಲ್ಲೂಕಿನ ಹೋತಪೇಟ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 28 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಎಸ್.ಟಿ ಮಹಿಳೆಗೆ ಮೀಸಲಾಗಿದೆ. ಹೊತಪೇಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ಮಡ್ನಾಳ ಗ್ರಾಮದ ಗ್ರಾಪಂ ಸದಸ್ಯೆ ಅಂಬಲಮ್ಮ ಮರೆಪ್ಪ ಕಿರಿಹೈಯ್ಯಾಳ ಏಕೈಕ ಎಸ್.ಟಿ.ಮಹಿಳಾ ಸದಸ್ಯೆಯಾಗಿದ್ದು ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗಿದೆ.

ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 26 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್.ಟಿ.ಮಹಿಳಾ ಸದಸ್ಯರಿಗೆ ಮೀಸಲಾಗಿದೆ. ಕಾಂಗ್ರೆಸ್ ಬೆಂಬಲಿತ 20 ಸದಸ್ಯರಿದ್ದು, ಅದರಲ್ಲಿ ಅದೇ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗಂಗನಾಳ ಗ್ರಾಮದ ಸದಸ್ಯೆ ತಿಪ್ಪಮ್ಮ ಸಕ್ರೆಪ್ಪ ದೊರೆ ಅವರು ಏಕೈಕ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಿಗುವುದು ನಿಚ್ಚಳವಾಗಿದೆ.

ಸದಸ್ಯರ ಪ್ರವಾಸ: ಮೀಸಲಾತಿ ಹೊರ ಬಿಳುತ್ತಿದ್ದಂತೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲಿತ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಈಗಾಗಲೇ ತಂಡೋಪ ತಂಡವಾಗಿ ರಾಜ್ಯದ ವಿವಿಧ ಕಡೆ ಜೀಪಿನಲ್ಲಿ ಪ್ರವಾಸಕ್ಕೆ ತೆರಳಿದ್ದಾರೆ.

ಮಹಿಳಾ ಸದಸ್ಯರ ಬದಲು ಅವರ ಪತಿ ದೇವರು ತೆರಳಿರುವುದು ವಿಶೇಷವಾಗಿದೆ. ಅಧ್ಯಕ್ಷ ಆಯ್ಕೆಯ ದಿನಾಂಕ ಪ್ರಕಟವಾದ ದಿನವೇ ನೇರವಾಗಿ ನಾವು ಗ್ರಾಮಕ್ಕೆ ಆಗಮಿಸಿ ಮತ ಚಲಾಯಿಸುತ್ತೇವೆ ಎನ್ನುತ್ತಾರೆ ಪ್ರವಾಸಕ್ಕೆ ತೆರಳಿದ ಸದಸ್ಯರು ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT