ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಳ: ಆರ್‌.ವಿ.ದೇಶಪಾಂಡೆ

ಮಂಗಳವಾರ, ಜೂಲೈ 16, 2019
24 °C

ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಳ: ಆರ್‌.ವಿ.ದೇಶಪಾಂಡೆ

Published:
Updated:
Prajavani

ಯಾದಗಿರಿ: ಭಾರತೀಯ ಜೈನ ಸಂಘಟನೆ ಸಹಯೋಗದಲ್ಲಿ ಜಿಲ್ಲೆಯ ಒಟ್ಟು 24 ಕೆರೆಗಳ ಹೂಳು ತೆಗೆಯಲಾಗಿದೆ. ಯರಗೋಳ ಕೆರೆ 800 ಎಕರೆ ಪ್ರದೇಶದಲ್ಲಿದ್ದು, 200 ಎಕರೆ ಪ್ರದೇಶದಲ್ಲಿ ಹೂಳು ತೆಗೆಯಲಾಗಿದೆ. ಇದರಿಂದ ನೀರಿನ ಸಂರಕ್ಷಣೆ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋಗದಿಂದ ಜಿಲ್ಲೆಯನ್ನು ಮಹತ್ವಾಕಾಂಕ್ಷೆ ಜಿಲ್ಲೆ ಎಂದು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಭಾರತೀಯ ಜೈನ ಸಂಘಟನೆಗೆ ಕೆರೆಗಳ ಹೂಳು ತೆಗೆಯಲು ರಾಜ್ಯ ಸರ್ಕಾರ ಡೀಸೆಲ್ ಖರ್ಚು ನೀಡಲಿದೆ.  ಈ ಮಣ್ಣನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹೊಲಗಳಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

ಕೇಂದ್ರ ಸರ್ಕಾರ ನೀರು ಮರಪೂರಣ, ಜಲಸಂವರ್ಧನೆಗೆ ಹೆಚ್ಚು ಒತ್ತು ನೀಡಿದೆ. ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉತ್ತಮ ಕಾರ್ಯಕ್ರಮ ಆಗಿದೆ ಎಂದರು.

ಇದೇ ತಿಂಗಳಲ್ಲಿ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಕೃಷಿ ಸಚಿವರೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಣಯಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ನಂತರ ಸಚಿವರು, ಯರಗೋಳದಿಂದ ಅಲ್ಲಿಪುರ ತಾಂಡಾ ಬಳಿ ಹೆಸರು ಬೆಳೆ ವೀಕ್ಷಣೆ ಮಾಡಿದರು. ನಂತರ ಯಾದಗಿರಿ ಎಪಿಎಂಸಿಯ ಮೇವು ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !