ಗ್ರಾಮೀಣ ಮಟ್ಟದಲ್ಲಿ ನಮ್ಮ ಸಿಬ್ಬಂದಿ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು
ಶಾಂತಗೌಡ ಬಿರಾದಾರ, ತಹಶೀಲ್ದಾರ್
ಮಳೆಯಿಂದ ಬೇರು ಕೊಳೆಯದಂತೆ ಸಾಲುಗಳ ನಡುವೆ ಬಸಿ ಕಾಲುವೆಗಳನ್ನು ನಿರ್ಮಿಸಬೇಕು. ಮಳೆ ನಿಂತ ನಂತರ ಸಸಿಗಳಿಗಾದ ಪೋಷಕಾಂಶಗಳ ಕೊರತೆ ನೀಗಿಸಲು 19:19:19 (ವಾಟರ್ ಬೇಸಡ್ ಫರ್ಟಿಲೈಸರ್) ಸಿಂಪಡಿಸಬೇಕು
ಮಲ್ಲಿಕಾರ್ಜುನ ವಾರದ, ಕೃಷಿ ಅಧಿಕಾರಿ
ಸತತ ಮಳೆಗೆ ಈಗಾಗಲೇ ಕಟಾವಿಗೆ ಬಂದ ಹೆಸರು ಬೆಳೆ ಕೈತಪ್ಪಲಿದೆ. ತೊಗರಿ ಬೆಳೆಯ ಬೇರು ಕೊಳೆಯುವ ಸಾಧ್ಯತೆಯಿದ್ದು ಕೃಷಿ ಮತ್ತು ಕಂದಾಯ ಅಧಿಕಾರಿಗಳು ಪರಿಹಾರ ಕೊಡಿಸಲು ಆದ್ಯತೆ ನೀಡಲಿ