ನಾರಾಯಣಪುರ: ಸಿಡಿಲಿಗೆ ಮನೆಯೊಂದು ಸುಟ್ಟ ಭಸ್ಮವಾಗಿರುವ ಘಟನೆ ನಾರಾಯಣಪುರ ಗ್ರಾ.ಪಂ ವ್ಯಾಪ್ತಿಯ ದೇವರಗಡ್ಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ದೇವರಗಡ್ಡಿ ಗ್ರಾಮದ ನಿವಾಸಿ ಶಿವಪ್ಪ ಗದ್ದೆಪ್ಪ ಗೆದ್ದಲಮರಿ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಅದೃಷ್ಟವಶಾತ್ ಸಿಡಿಲು ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಜೀವ ಹಾನಿಯಾಗಿಲ್ಲ.

ಸಿಡಿಲಿನ ಬೆಂಕಿಯ ಜ್ವಾಲೆಯು ಇಡೀ ತಗಡಿನ ಮನೆಯನ್ನು ಆವರಿಸಿದ್ದರಿಂದ ಮನೆ ಸಂಪೂರ್ಣ ಭಸ್ಮವಾದರೆ ಮನೆಯಲ್ಲಿದ್ದ ದವಸ ಧಾನ್ಯಗಳು, ಹಣ, ಆಭರಣ, ಬಟ್ಟೆ ಸೇರಿ ಇತರೆ ವಸ್ತುಗಳು ಸುಟ್ಟು ಕರಕಲಾಗಿ ಹಾನಿ ಸಂಭವಿಸಿದೆ. ಹಾನಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಅಪ್ಪಣ್ಣ ಗುಡಿಮನಿ ತಿಳಿಸಿದರು.

ಸಿಡಿಲಿನಿಂದ ಹಾನಿಗೊಳಗಾದ ನಿವಾಸಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಮುಖಂಡ ಆಂಜನೇಯ ದೊರೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.