ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಡಗೇರಾ: ಅವಸಾನದ ಅಂಚಿನಲ್ಲಿ ಹೂಡೆಗಳು

ವಾಟ್ಕರ್ ನಾಮದೇವ
Published 4 ಜುಲೈ 2024, 6:14 IST
Last Updated 4 ಜುಲೈ 2024, 6:14 IST
ಅಕ್ಷರ ಗಾತ್ರ

ವಡಗೇರಾ: ಗತಕಾಲದ ವೈಭವಕ್ಕೆ ಕಿರೀಟದಂತೆ ಕಂಗೊಳಿಸುತ್ತಿದ್ದ ಹೂಡೆಗಳು ಆಧುನಿಕತೆಯ ಹೊಡೆತಕ್ಕೆ ತತ್ತರಿಸಿ ಅಳಿವಿನ ಅಂಚಿಗೆ ತಲುಪಿವೆ

ಸುರಪುರದ ದೊರೆಗಳ ಹಾಗೂ ಹೈದ್ರಬಾದಿನ ನಿಜಾಂ ದೊರೆಗಳ ಕಾಲದಲ್ಲಿ ನಿರ್ಮಿಸಿದ ಹೂಡೆಗಳು ವಿಶ್ವ ಖ್ಯಾತಿ ಹೊಂದಿವೆ

ಹೂಡೆಗಳ ವಿಶೇಷ: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೆಲವೊಂದು ಹೂಡೆಗಳನ್ನು ಸುರಪುರದ ದೊರೆಗಳು ಕಟ್ಟಿಸಿದರೆ ಇನ್ನೂ ಕೆಲವು ಹೈದ್ರಾಬಾದಿನ ನಿಜಾಂ ದೊರೆಗಳು ಕಟ್ಟಿಸಿದ್ದಾರೆ. ತಮ್ಮ ರಾಜ್ಯದ ಸರಹದ್ದು ಗುರುತಿಸಲು ಹಾಗೂ ವಿರೋಧಿ ಸೈನಿಕರ ಚಲನವಲನಗಳನ್ನು ಕಂಡು ಹಿಡಿಯಲು ರಾಜರುಗಳು ತಮ್ಮಸೈನಿಕರನ್ನು ಇಂತಹ ಹೂಡೆಗಳಲ್ಲಿ ಕಾವಲಿಗೆ ಇಡುತಿದ್ದರು.

ಇಂತಹ ಹೂಡೆಗಳಲ್ಲಿ ಕಾವಲಿದ್ದ ಸೈನಿಕರು ಕಿಟಿಕಿಯ ಮುಖಾಂತರ ಪಹರೆ ನಡೆಸುತಿದ್ದರು. ಯುದ್ಧ ನಡೆದ ಸಮಯದಲ್ಲಿ ರಾಜ್ಯದಿಂದ ಎಷ್ಟು ಜನ ಸೈನಿಕರು ರಣರಂಗದಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ವಿರೋಧಿ ರಾಜ್ಯದ ಸೈನಿಕರು ಎಲ್ಲಿ ಎಲ್ಲಿ ಅಡಗಿ ಕುಳಿತಿದ್ದಾರೆ. ಅವರ ಚಲನವಲನಗಳ ಸಂಪೂರ್ಣ ಮಾಹಿತಿಯನ್ನು ನೀಡುತಿದ್ದರು. ಮುಖಂಡರು ರಾಜರಿಗೆ ಮಾಹಿತಿಯನ್ನು ರವಾನಿಸುತಿದ್ದರು ಎಂಬ ಮಾಹಿಯನ್ನು ಹುಲ್ಕಲ್ (ಜೆ) ಗ್ರಾಮದ ನರಸಪ್ಪ ನಾಯಕ ನೀಡಿದರು.

ಹೂಡೆಗಳ ಆಕಾರ: ಈ ಹೂಡೆಗಳು ಗುಮ್ಮಿ ಆಕಾರದಲ್ಲಿ ಇದ್ದು ಅಲ್ಲಲ್ಲಿ ಚೌಕಾಕಾರದ ಕಿಟಿಕಿಗಳನ್ನು ಬಿಡಲಾಗಿದೆ. ನೆಲದಿಂದ ನೂರಕ್ಕಿಂತ ಹೆಚ್ಚಿನ ಅಡಿ ಎತ್ತರ ನೂರು ಅಡಿಕ್ಕಿಂತ ಹೆಚ್ಚಿನ ಸುತ್ತಳೆಯಲ್ಲಿ ಬೃಹತ್ ಗಾತ್ರದ ಕಲ್ಲಿನಲ್ಲಿ ಕಟ್ಟಲಾಗಿದೆ. ಈ ಹೂಡೆಗಳಲ್ಲಿ ಎಲ್ಲಿಯೂ ಮೇಲೆ ಹತ್ತುವ ಏಣಿಗಳು ಕಂಡು ಬರುವುದಿಲ್ಲ. ಹೂಡೆಗಳನ್ನು ಹತ್ತಬೇಕಾದರೆ ಗೋಡೆಗಳಲ್ಲಿ ಇರುವ ರಂದ್ರಗಳ ಮುಖಾಂತರವೇ ಮೇಲೆ ಹತ್ತಬೇಕು.

ಕಳ್ಳಕಾಕರಿಂದ ಹಾಗೂ ದಾಳಿಕೊರರಿಂದ ಸಂಪತ್ತುನ್ನು ರಕ್ಷಣೆ ಮಾಡಲು ಹೂಡೆಯಲ್ಲಿ ಮೂರರಿಂದ ನಾಲ್ಕೂ ಕೋಣೆಗಳನ್ನು ಕಟ್ಟಿ ರಾಜರು ಹಾಗೂ ಗ್ರಾಮದ ಮುಖಂಡರು ಅದರಲ್ಲಿ ಬಂಗಾರ, ಬೆಳ್ಳಿ ಹಾಗೂ ದವಸ ಧ್ಯಾನ್ಯಗಳನ್ನು ಸಂಗ್ರಹಿಸಿ ಇಟ್ಟು ಬೀಗ ಹಾಕುತಿದ್ದರು. ಇದರ ಜತೆಗೆ ಸೈನಿಕರಿಗೆ ಹಾಗೂ ಗ್ರಾಮ ರಕ್ಷಕರಿಗೆ ವಸತಿ ವ್ಯವಸ್ಥೆಯು ಇತ್ತು. ಇನ್ನೂ ಕೆಲವು ಹೂಡೆಗಳಲ್ಲಿ ಗ್ರಾಮ ದೇವತೆಯಾದ ತಾಯಮ್ಮ ದೇವಾಲಯ ಕಂಡು ಬರುತ್ತದೆ.

ಸಾಮಾನ್ಯವಾಗಿ ಹೂಡೆಗಳು ನೆಲದಿಂದ ಮೇಲೆ ಕಲ್ಲಿನಲ್ಲಿ ಕಟ್ಟಲಾಗುತ್ತದೆ. ಆದರೆ ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹುಲ್ಕಲ್ (ಜೆ) ಗ್ರಾಮದಲ್ಲಿ ಗುಡ್ಡದ ಮೇಲೆ ಹೂಡೆಯನ್ಜು ಕಟ್ಟಲಾಗಿದೆ.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇಂತಹ ಅನೇಕ ಹೂಡೆಗಳು ಇವೆ. ಸಂಗಮ, ಗೋನಾಲ,ಸೂಗುರ ಗ್ರಾಮದಲ್ಲಿ ಇರುವ ಹೂಡೆಗಳನ್ನು ನಿಧಿಗಳ್ಳರು ನೆಲಸಮ ಮಾಡಿದ್ದಾರೆ. ಕೊಂಗಂಡಿ ಗ್ರಾಮದಲ್ಲಿ ಇರುವ ಹೂಡೆಯು ಉತ್ತಮ ಸ್ಥಿತಿಯಲ್ಲಿ ಇದೆ.

ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಇರುವ ಹೂಡೆ
ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಇರುವ ಹೂಡೆ
ಹೂಡೆಗಳು ನಿರ್ವಹಣೆ ಇಲ್ಲದೇ ಇಂದು ಶಿಥಿಲಾವಸ್ಥೆ ತಲುಪಿವೆ. ಅವುಗಳನ್ನು ರಕ್ಷಣೆಗೆ ಸರ್ಕಾರ ಮುಂದಾಗಬೇಕು.
ಸೂಗಪ್ಪಗೌಡ ಮಾಲೀ ಪಾಟೀಲ್ ಕೊಂಗಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT