ಶಹಾಪುರ: ‘2021-2022ನೇ ಸಾಲಿನ ವಾಜಪೇಯಿ ನಗರ ಹಾಗೂ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 752 ಮನೆ ಅನುಮೋದನೆ ಆಗಿದ್ದವು. ಅದರಲ್ಲಿ 380 ಮನೆ ಪೂರ್ಣಗೊಂಡಿವೆ. ಇನ್ನೂ 211 ಮನೆಗಳ ನಿರ್ಮಾಣ ಹಂತದಲ್ಲಿವೆ. ಹೀಗೆ 591 ಮನೆ ನಿರ್ಮಾಣದ ಸಾಗಿದ್ದು, ಯೋಜನೆಯು ಶೇ 79ರಷ್ಟು ಅನುಷ್ಠಾನವಾಗಿದೆ’ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಮನಿ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ದರ್ಶನಾಪುರ ಅವರು, ನಗರಕ್ಕೆ ಹೆಚ್ಚುವರಿಯಾಗಿ 752 ಮನೆ ಮಂಜೂರು ಮಾಡಿಸಿದ್ದರು. ಅದರಂತೆ ನಗರದ ನಿವಾಸಿಯಾಗಿದ್ದು, ಸ್ವಂತ ಜಾಗ ಹೊಂದಿರುವವರಿಗೆ ವಾಜಪೇಯಿ ನಗರ ಯೋಜನೆ ಅಡಿಯಲ್ಲಿ ಒಂದು ಮನೆ ನಿರ್ಮಿಸಿಕೊಳ್ಳಲು ₹ 2.70 ಲಕ್ಷ, ಅಂಬೇಡ್ಕರ್ ಯೋಜನೆ ಅಡಿಯಲ್ಲಿ ₹ 3.50 ಲಕ್ಷ ಅನುದಾನ ಬರುತ್ತದೆ. ಮನೆ ನಿರ್ಮಾಣ ಆರಂಭದ ನಂತರ ವಿವಿಧ ಹಂತದ ಕಂತುಗಳಲ್ಲಿ ಸಹಾಯಧನ ಬರುತ್ತದೆ ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ ಮಾಹಿತಿ ನೀಡಿದರು.

ಯೋಜನೆಗೆ ಆಯ್ಕೆಯಾದರೂ ಮನೆ ನಿರ್ಮಿಸಿಕೊಳ್ಳದ 300 ಫಲಾನುಭವಿಗಳಿಗೆ ನೋಟಿಸು ಜಾರಿ ಮಾಡಿ, ಸಹಾಯಧನ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದೆವು. ಅದರಲ್ಲಿ 139 ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಆರಂಭಿಸಿದ್ದಾರೆ. ಇನ್ನೂ 161 ಫಲಾನುಭವಿಗಳು ನಿರ್ಮಿಸಿಕೊಂಡಿಲ್ಲ. ಇನ್ನೊಮ್ಮೆ ನೋಟಿಸು ಜಾರಿ ಮಾಡಿ ಸೂಚಿಸಲಾಗುವುದು. ನಂತರ ಮಂಜೂರಾತಿಯನ್ನು ರದ್ದುಪಡಿಸಲು ಅವಕಾಶವಿದೆ’ ಎಂದು ತಿಳಿಸಿದರು.

ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಿ ಶೇ 79ರಷ್ಟು ಸಾಧನೆ ಮಾಡಿದ್ದೇವೆ. ಇನ್ನೂ ಮನೆ ನಿರ್ಮಿಸಿಕೊಳ್ಳದ ಫಲಾನುಭವಿಗಳಿಗೆ ನೋಟಿಸು ಜಾರಿ ಮಾಡಿದ್ದರಿಂದ 139 ಮಂದಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ
ಜೀವನಕುಮಾರ ಕಟ್ಟಿಮನಿ ಪೌರಾಯುಕ್ತ ಶಹಾಪುರ

ಬೇರೆಡೆ ನೀರಸ ಸ್ಪಂದನೆ:

ವಾಜಪೇಯಿ ನಗರ ಹಾಗೂ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ ಕೆಂಭಾವಿ ಪುರಸಭೆಗೆ 149 ಅನುಮೋದನೆಯಾಗಿದ್ದು 58 ಮನೆ ಮಾತ್ರ ನಿರ್ಮಾಣವಾಗಿವೆ. ಅದರಂತೆ ಕಕ್ಕೇರಾ ಪುರಸಭೆ 455 ಮನೆ ಅನುಮೋದನೆ ಆಗಿದ್ದು 169 ಮನೆ ನಿರ್ಮಿಸಿಕೊಂಡಿದ್ದಾರೆ. ಹುಣಸಗಿ ಪಟ್ಟಣ ಪಂಚಾಯಿತಿ 293 ಮನೆ ಅನುಮೋದನೆಗೊಂಡಿದ್ದವು. ಅದರಲ್ಲಿ 97 ಫಲಾನುಭವಿಗಳು ಮಾತ್ರ ಮನೆ ಕಟ್ಟಿಕೊಂಡಿದ್ದಾರೆ. ಮೂಲ ಸಮಸ್ಯೆಯೆಂದರೆ ದಾಖಲೆಗಳನ್ನು ರಾಜೀವಗಾಂಧಿ ವಸತಿ ನಿಗಮಕ್ಕೆ ಆನ್ಲೈನ್ ಮೂಲಕ ಮಾಹಿತಿ ಒದಗಿಸಬೇಕು. ಇದು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ. ಫಲಾನುಭವಿಗಳು ಕಚೇರಿಗೆ ಅಲೆದು ಸುಸ್ತಾಗಿ ಕೈಬಿಟ್ಟಿದ್ದಾರೆ ಎಂದು ನಗರಸಭೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅನುದಾನ ತಂದರೆ ಸಾಲದು ಅನುಷ್ಠಾನ ಮುಖ್ಯ:

ಜನಪರ ಯೋಜನೆ ಜಾರಿಗೆ ಬಂದಾಗ ಕ್ಷೇತ್ರಕ್ಕೆ ಅನುದಾನ ತಂದರೆ ಸಾಲದು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಆಗಷ್ಟೇ ಪ್ರತಿ ಫಲಾನುಭವಿಗೆ ತಲುಪುತ್ತದೆ. ವಸತಿ ಯೋಜನೆ ಜಾರಿಗೆ ಸಾಕಷ್ಟು ಅಡೆತಡೆಯಿದ್ದು ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಇದಕ್ಕೆ ಸಿಬ್ಬಂದಿಯ ಇಚ್ಛಾಶಕ್ತಿ ಹಾಗೂ ಅಧ್ಯಕ್ಷರ ಆಸಕ್ತಿ ಮುಖ್ಯವಾಗಿರುತ್ತದೆ. ಶಹಾಪುರ ನಗರಸಭೆಯಲ್ಲಿ ಶೇ 79ರಷ್ಟು ಗುರಿ ಸಾಧಿಸಿದೆ. ಇನ್ನೂ ಶೇ 21ರಷ್ಟು ಪೂರ್ಣಗೊಳಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಯತ್ನಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.