ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡೇದ ಯಲ್ಲಮ್ಮನ ಜಾತ್ರೆ

Last Updated 15 ಜನವರಿ 2022, 8:49 IST
ಅಕ್ಷರ ಗಾತ್ರ

ಆನೂರ.ಕೆ (ಸೈದಾಪುರ): ಗ್ರಾಮದ ಕಾಡಿನ ನಡುವೆ ಇರುವ ಹುಡೇದ ಯಲ್ಲಮ್ಮನ ಜಾತ್ರೆ ಸಂಭ್ರಮದಿಂದ ನಡೆಯಿತು.

ಆನೂರ.ಕೆ, ಆನೂರ.ಬಿ ಹಾಗೂ ಬೆಳಗುಂದಿ ಗ್ರಾಮಗಳ ಸೀಮೆ ಮಧ್ಯದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನವಿದೆ. ದೇವಿ ಈ ಗ್ರಾಮಗಳ ಆರಾಧ್ಯ ದೈವವಾಗಿದ್ದಾಳೆ. ಪ್ರತಿವರ್ಷ ಸಂಕ್ರಾತಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ದೂರದ ಊರುಗಳು ಹಾಗೂ ಸುತ್ತಮುತ್ತಲಿನ ಸೈದಾಪುರ, ಕ್ಯಾತನಾಳ, ಹೆಗ್ಗಣಗೇರಾ, ಮಲ್ಹಾರ, ಸಾವೂರು, ಲಿಂಗೇರಿ ಸೇರಿ ವಿವಿಧ ಗ್ರಾಮಗಳಿಂದ ಭಕ್ತರು ಬರುತ್ತಾರೆ.

ಕೊರೊನಾ ಕಾರಣ ಈ ಬಾರಿ ಭಕ್ತರ ಸಂಖ್ಯೆ ವಿರಳವಾಗಿತ್ತು. ದೇವಿ ದರ್ಶನಕ್ಕೆ ಮಾತ್ರ ಅವಕಾಶ ಕಲಿಸಲಾಗಿತ್ತು. ಮನೆಯಲ್ಲಿ ತಯಾರಿಸದ ಹೋಳಿಗೆ, ಕಡಬು, ಅನ್ನ ಸಾಂಬಾರು, ಸಜ್ಜೆರೊಟ್ಟಿ, ಪಲ್ಯ, ಖಾರ ಸೇರಿದಂತೆ ನೈವೇದ್ಯವನ್ನು ತಂದು ಜನ ಬೆಳಿಗ್ಗೆ ಕುಟುಂಬ ಸಮೇತರಾಗಿ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು. ಭಕ್ತರು ಕುಟುಂಬ ಸದಸ್ಯರು ಕೂಡಿಕೊಂಡು ಊಟ ಮಾಡಿ ನಂತರ ಸಂಜೆಯಾಗುತ್ತಿದ್ದಂತೆ ಮನೆಗಳಿಗೆ ತೆರಳಿದರು.

ಭಕ್ತರು ಹರಕೆ ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT