ಹುಣಸಗಿ: ಪಟ್ಟಣ ಸೇರಿದಂತೆ ಹೆಬ್ಬಾಳ, ಬಿ, ವಜ್ಜಲ, ಬೈಲಾಫುರ ಸೇರಿದಂತೆ ತಾಲ್ಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಶನಿವಾರ ಭೇಟಿ ನೀಡಿ ಪ್ಬರಗತಿಯ ಕುರಿತು ಮಾಹಿತಿ ಪಡೆದುಕೊಂಡು ಹಲವಾರು ಸಲಹೆ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮನೆ ಮನೆ ಸಮೀಕ್ಷೆಯನ್ನು ಇ-ಆಡಳಿತ ಮೊಬೈಲ್ ಆಪ್ ಮುಖಾಂತರ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ಜೆಸ್ಕಾಂ ಯುಎಚ್ಐಡಿ ಸಂಖ್ಯೆ ನೀಡುವ ಮೂಲಕ ಕುಟುಂಬಗಳನ್ನು ಗುರುತಿಸಲಾಗಿದೆ ಅದರಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು. ಜಿಲ್ಲೆಯಲ್ಲಿ ಬಹುತೇಕ ಕಾರ್ಯ ಪೂರ್ಣ ಹಂತದಲ್ಲಿದೆ ಎಂದರು.

ತಾಲ್ಲೂಕಿನಲ್ಲಿ ಒಟ್ಟು 2,13,268 ಜನರಲ್ಲಿ 1,77,488 ಜನರ ಸಮಿಕ್ಷಾ ಪೂರ್ಣಗೊಂಡಿದೆ. ಶೇ 83.22 ರಷ್ಟು ಪೂರ್ಣವಾಗಿದೆ ಎಂದು ಹುಣಸಗಿ ತಹಶೀಲ್ದಾರ್ ಎಂ. ಬಸವರಾಜ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕಲ್ಲಪ್ಪ, ಸಹಾಯಕ ನೋಡಲ್ ಅಧಿಕಾರಿ ಕಾಂತೇಶ್ ಹಲಗಿಮನಿ, ಕಂದಾಯ ನಿರೀಕ್ಷಕ ರವಿ ಹಿರೇಮಠ್, ಗಣತಿದಾರ ಪರುಶುರಾಮ, ಗ್ರಾಮ ಆಡಳಿತ ಅಧಿಕಾರಿ ಹಸನ್ ಮುಲ್ಲಾ, ಶಿವಲೀಲಾ ಬಿರಾದಾರ, ನಾಗರತ್ನ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.