ಕಕ್ಕೇರಾ: ತಾಲ್ಲೂಕಿನ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಸಿದ್ದ. ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟಿನ್, ವಾಣಿಜ್ಯ ಮಳಿಗೆ, ಸಮುದಾಯ ಭವನಗಳು, ಮಾದರಿ ನಾಡ ಕಚೇರಿಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿ,‘ಇಂದಿರಾ ಕ್ಯಾಂಟಿನ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

‘ಇಂದಿರಾ ಕ್ಯಾಂಟಿನ್ ಕಾರ್ಯ ನಿರ್ವಹಿಸುವರಿಗೆ ಸ್ವಚ್ಛತೆ, ಶುಚಿಯಾಗಿ ಕಾರ್ಯನಿರ್ವಹಿಸಬೇಕು. ನೂತನ ನಾಡಕಚೇರಿಯಲ್ಲಿ ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳನ್ನು ಬೇಗನೆ ಮಾಡಿಕೊಡಬೇಕು’ ಎಂದು ಹೇಳಿದರು.

ನಂದಣ್ಣಪ್ಪ ಪೂಜಾರಿ, ರಾಜಾ ವಿಜಯಕುಮಾರ ನಾಯಕ್, ಗುಂಡಪ್ಪ ಸೋಲಾಪುರ, ರಾಜಶೇಖರಗೌಡ ವಜ್ಜಲ್, ಅಯ್ಯಾಳಪ್ಪ ಪೂಜಾರಿ, ದೇವಿಂದ್ರಪ್ಪ ದೇಸಾಯಿ, ಶರಣು ಸೋಲಾಪುರ, ಮುದ್ದಣ್ಣ ಅಮ್ಮಾಪುರ, ಸಿದ್ದಣ್ಣ ದೇಸಾಯಿ, ಮುತ್ತು ಸ್ವಾಮಿ, ಗುಡದಪ್ಪ ಬಿಳೇಭಾವಿ, ರಮೇಶ ಶೆಟ್ಟಿ, ಪರಮಣ್ಣ ತೇರಿನ್, ನಿಂಗಣ್ಣ ಬೂದಗುಂಪಿ, ದೇವಪ್ಪ ಮ್ಯಾಗೇರಿ, ರಾಮಚಂದ್ರಪ್ಪ ನಾಯ್ಕ್, ನಿಂಗಪ್ಪ ನಾಯ್ಕ್, ಬಸಯ್ಯ, ಅಡಿವೆಯ್ಯಸ್ವಾಮಿ, ನಂದಣ್ಣವಾರಿ, ರಂಜಾನಸಾಬ, ಬಸವರಾಜ ಕಟ್ಟಿಮನಿ, ಮಲ್ಲು ನಾಯ್ಕ್ ಸೇರಿದಂತೆ ಅನೇಕರು ಹಾಜರಿದ್ದರು.

2021ನೇ ಸಾಲಿನ ಪಟ್ಟಣದ ಮಾದರಿ ನಾಡಕಚೇರಿ ಕಟ್ಟಡ ಸರಿಯಾಗಿ ನಿರ್ಮಿಸಿಲ್ಲ. ಪ್ರಸ್ತುತ ಸುಮಾರು ಮೀಟರ್ ಸೀಳಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹೇಗೆ ಬಿಲ್ ಮಾಡಿದ್ದಾರೆ, ಅಧಿಕಾರಿಗಳು, ಗುತ್ತಿಗೆದಾರ, ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹರ್ಷಿ ವಾಲ್ಮೀಕಿ ಅಧ್ಯಕ್ಷ ಚಂದ್ರು ವಜ್ಜಲ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.