ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡನೀಯ

ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ
Last Updated 22 ಜೂನ್ 2021, 14:05 IST
ಅಕ್ಷರ ಗಾತ್ರ

ವಡಗೇರಾ: ಪೆಟ್ರೋಲ್, ಡಿಸೆಲ್, ಗ್ಯಾಸ್ ಹಾಗೂ ಇತರೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಿಸಿರುವ ಕಾರಣ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ನಂತರ ತಹಶೀಲ್ದಾರರ ಮುಖಾಂತರ ರಾಷ್ರಪತಿ ಮತ್ತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಹಣಮಂತ್ರಾಯ ತೇಕರಾಳ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಉದ್ಯಮಿಗಳ ಕೈಗೊಂಬೆಯಾಗಿದೆ. ದೇಶದ ಸಾಮಾನ್ಯ ಜನರ ಜೀವದ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲೇ ಇಡೀ ದೇಶದ ಜನರು ಕೋವಿಡ್ ಅಲೆಯಿಂದ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಇದರ ಜತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಅಗತ್ಯ ವಸ್ತುಗಳ ಬೆಲೆಯನ್ನು ಪ್ರತಿದಿನ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯುತ್ತಿವೆ ಎಂದರು.

ಫಕೀರ್ ಅಹ್ಮದ ಮರಡಿ ಮಾತನಾಡಿ, ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಕೂಡಲೇ ಪೆಟ್ರೋಲ್, ಡೀಸೆಲ್, ಸಿಲೆಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವುದರ ಜತೆಗೆ ಸಿಲೆಂಡರ್ ಸಬ್ಸಿಡಿಯನ್ನು ಸಹ ಪಾವತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ಮಾಡುತ್ತೇವೆ ಎಂದು ಹೇಳಿದರು.

ಮಲ್ಲಣ್ಣ ನೀಲಹಳ್ಳಿ, ಶಿವಲಿಂಗಪ್ಪ ಪಿಡ್ಡೆಗೌಡ, ಜಲಾಲ್ ಕೋನಹಳ್ಳಿ, ಗುರುನಾಥ್ ನಾಟೇಕರ್, ಸಂತೋಷ ಬೊಜ್ಜಿ, ಭೀಮಣ್ಣ ಬೂದಿಹಾಳ, ದೇವು ಜಡಿ, ಭೀಮಶೆಪ್ಪ ಕೋಮಾರ್, ರಾಜಕುಮಾರ್ ಬಸವನಗರ, ರಡ್ಡೆಪ್ಪ ಬುಸ್ಸೇನಿ, ಕಂಬಯ್ಯ ಕೊಪ್ಪುರ, ನಬಿಚಾಂದ ಕೋನಹಳ್ಳಿ, ಶರಣಪ್ಪ ಹೊಸಮನಿ, ಶಿವರಾಜ್ ಶಿವಣ್ಣೋರ, ಹಣಮಂತ ಜೋಗಿ, ಭೀಮಾಶಂಕರ್ ತೇಕರಾಳ, ಮಲ್ಲಪ್ಪ ಪಿಡ್ಡೆಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT