ನಾರಾಯಣಪುರ: ಶುಕ್ರವಾರ ಶೋರಾಪುರ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೆ. ಮಾರುತಿ ಭೇಟಿ ನೀಡಿ ಜಲಾಶಯದ ಒಳಹರಿವು, ಹೊರಹರಿವು, ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಗೇಟ್‌ಗಳ ಬಗ್ಗೆ ಕೆಬಿಜೆಎನ್ಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶೋರಾಪುರ ತಶೀಲ್ದಾರ ಕೆ. ವಿಜಯಕುಮಾರ, ಹುಣಸಗಿ ತಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ, ಇಇ ಅಶೋಕರೆಡ್ಡಿ ಪಾಟೀಲ, ಉಪತಶೀಲ್ದಾರ್ ಕಲ್ಲಪ್ಪ ಜಂಗಿನಗಡ್ಡಿ, ಪ್ರಭಾರ ಎಇಇ ವಿಜಯಕುಮಾರ ಅರಳಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.