ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಸ್ಥಿತಿ–ಗತಿ| ಯಾದಗಿರಿ, ಗುರುಮಠಕಲ್ 'ಕೈ' ಟಿಕೆಟ್ ಯಾರಿಗೆ?

ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಪೈಕಿ ಶಹಾಪುರ, ಸುರಪುರ ಹಾಲಿ, ಮಾಜಿ ಶಾಸಕರಿಗೆ ಟಿಕೆಟ್ ಸಂಭವ
Last Updated 2 ಫೆಬ್ರುವರಿ 2023, 12:17 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ 28 ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಗುರುವಾರ (ಫೆಬ್ರುವರಿ 2)ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ, ಹುಣಸಗಿ ತಾಲ್ಲೂಕುಗಳು ಇವೆ. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್ ನಾಲ್ಕು ಮತಕ್ಷೇತ್ರಗಳಿವೆ.

ಕಾಂಗ್ರೆಸ್‌ನಿಂದ ಯಾದಗಿರಿ ಮತಕ್ಷೇತ್ರದಲ್ಲಿ 18 ಮಂದಿ, ಗುರುಮಠಕಲ್ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರೆ, ಶಹಾಪುರ–1, ಸುರಪುರ–1 ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಶಹಾಪುರದಲ್ಲಿ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ಸುರಪುರ ಮಾಜಿ ಶಾಸಕ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ.

‘ಯಾದಗಿರಿ ಮತಕ್ಷೇತ್ರದಲ್ಲಿ ನಾಲ್ವರು ಸಂಭವನೀಯ ಅಭ್ಯರ್ಥಿಗಳು, ‌ಗುರುಮಠಕಲ್ ಮತಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳನ್ನು ಅಂತಿಮ ಮಾಡಿ, ಕೆಪಿಸಿಸಿಗೆ ಕಳಿಸಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾಕೇಂದ್ರದಲ್ಲಿ ಹೆಚ್ಚು ಆಕಾಂಕ್ಷಿಗಳು

ಜಿಲ್ಲಾ ಕೇಂದ್ರವಾದ ಯಾದಗಿರಿ ಮತಕ್ಷೇತ್ರದಲ್ಲಿ 18 ಮಂದಿ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಇದರಲ್ಲಿ ಹಲವರು ಹೊಸಬರಿದ್ದರೆ‍, ಕೆಲವು ಹಳೆ ತಲೆಗಳಿವೆ.

ಕೆಲ ವರ್ಷಗಳಿಂದ ಕಾಂಗ್ರೆಸ್ ಸೇರಿದವರು, ಜಿಲ್ಲೆಯಲ್ಲದವರು, ಸಾಮಾಜ ಸೇವಕರು ಸೇರಿ ಇನ್ನಿತರರು ಅರ್ಜಿ ಸಲ್ಲಿಸಿದ್ದಾರೆ‌. ಕ್ಷೇತ್ರದ ಜನರಿಗೆ ಕೆಲವರ ಮುಖಪರಿಚಯವೇ ಇಲ್ಲ. ಇಂಥವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಪಕ್ಷದ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವುದು ಕುತೂಹಲ ನಡೆಯಾಗಿದೆ.

ಕಾಂಗ್ರೆಸ್ ಪಕ್ಷವು ಜಿಲ್ಲಾ ಕೇಂದ್ರದಲ್ಲಿ ಪ್ರಜಾ ಧ್ವನಿ ಸಮಾವೇಶ ಅಯೋಜಿಸಿ ಚುನಾವಣಾ ತಯಾರಿ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಬಸ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಫೆ.10ರಂದು ಸುರಪುರ, ಶಹಾಪುರ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ನಡೆಯಲಿದೆ.
*******

ಏಕೈಕ ಮೀಸಲು ಕ್ಷೇತ್ರ
ಯಾದಗಿರಿ, ಶಹಾಪುರ, ಗುರುಮಠಕಲ್ ಮತಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿಗಳಿದ್ದರೆ, ಸುರಪುರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಹಾಲಿ ಶಾಸಕ ನರಸಿಂಹ ನಾಯಕ (ರಾಜೂಗೌಡ) ಮೂರು ಬಾರಿ ಗೆದ್ದಿದ್ದಾರೆ. ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟಪ್ಪ ನಾಯಕ ಈ ಬಾರಿ ತಮ್ಮ ಕೈವಶ ಮಾಡಿಕೊಳ್ಳಲು ಸಾಕಷ್ಟು ತಯಾರಿ ನಡೆಸಿದ್ದಾರೆ. ‌
***
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ

ಶಹಾಪುರ: ಶರಣಬಸಪ್ಪಗೌಡ ದರ್ಶನಾಪುರ

ಸುರಪುರ: ರಾಜಾವೆಂಕಟಪ್ಪ ನಾಯಕ

ಯಾದಗಿರಿ ಮತಕ್ಷೇತ್ರ: ಚನ್ನಾರೆಡ್ಡಿ ಪಾಟೀಲ ತುನ್ನೂರ, ಮರಿಗೌಡ ಹುಲ್ಕಲ್, ಡಾ.ಭೀಮಣ್ಣ ಮೇಟಿ, ಶರಣಪ್ಪ ಸಲಾದಪುರ, ಡಾ.ಎಸ್‌.ಬಿ.ಕಾಮರೆಡ್ಡಿ ಬೆಂಡೆಬೆಂಬಳಿ, ಬಸರೆಡ್ಡಿ ಅನಪುರ, ಮಾಣಿಕರೆಡ್ಡಿ ಕುರಕುಂದಿ, ಶ್ರೀನಿವಾಸರೆಡ್ಡಿ ಕಂದಕೂರ, ಸತೀಶ ಕಂದಕೂರ, ಎ.ಸಿ.ಕಾಡ್ಲೂರ, ಡಾ.ಅನುರಾಗ ಮಾಲಕರಡ್ಡಿ, ಬಸ್ಸುಗೌಡ ಬಿಳ್ಹಾರ, ನಿಖಿಲ್ ಶಂಕರ್‌, ವಿನೋದ ಪಾಟೀಲ, ರಾಯಪ್ಪಗೌಡ ದರ್ಶನಾಪುರ, ಗುಲಾಮುಸ್ ಸಕ್ಲೇನ್, ಜಹೀರುದ್ದೀನ್, ಇಬ್ರಾಹಿಂ ಸಿರವಾರ.

ಗುರುಮಠಕಲ್ ಮತಕ್ಷೇತ್ರ

ಶರಣಪ್ಪ ಮಾನೇಗಾರ, ಶ್ರೇಣಿಕುಮಾರ ದೋಕಾ, ಬಸರೆಡ್ಡಿ ಅನಪುರ, ಸಾಯಿಬಣ್ಣ ಬೋರಬಂಡಾ, ತಿಪ್ಪಣ್ಣ ಕಮಕನೂರ, ನಿತ್ಯಾನಂದ ಪೂಜಾರಿ, ಡಾ.ಉದಯಕುಮಾರ ಡಾ.ಯೋಗೇಶ ಬೆಸ್ತರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT