ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗಣಪುರ ಗ್ರಾಮದಲ್ಲಿ ನೂತನ ಲಕ್ಷ್ಮೀ ದೇವಸ್ಥಾನ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ಮಾಡಲಾಯಿತು.
ದೇವಸ್ಥಾನ ಲೋಕಾರ್ಪಣೆ ಮಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಗಣಪುರ ಗ್ರಾಮದಲ್ಲಿ ಸಣ್ಣ ಗದ್ದುಗೆ ಇತ್ತು. ಇದನ್ನು ಕಂಡ ಗ್ರಾಮದ ಭೀಮರಾಯ ರಾಯಪ್ಪನೋರ್ (ಸೂರತ್) ಇಲ್ಲಿ ಒಂದು ದೇವಸ್ಥಾನ ನಿರ್ಮಿಸಬೇಕೆಂಬ ಸಂಕಲ್ಪ ಮಾಡಿ ಸುಮಾರು ₹10 ಲಕ್ಷ ವೆಚ್ಚ ಮಾಡಿ ಲಕ್ಷ್ಮೀ ದೇವಿ ದೇವಸ್ಥಾನ ನಿರ್ಮಿಸಿದ್ದರು. ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪಿಸಿದರು ಎಂದರು.
ದೇವಸ್ಥಾನ ಪ್ರತಿಷ್ಠಾಪನೆಗೆ ಮೊದಲು ಯಾದಗಿರಿ ಭೀಮಾ ನದಿಗೆ ತೆರಳಿ ಮೂರ್ತಿಗಳ ಮಜ್ಜನ ಮಾಡಿ ಆಗ್ರೋದಕದೊಂದಿಗೆ ಮೆರವಣಿಗೆಯಲ್ಲಿ ಮರಳಿ ಬಂದು ಪ್ರತಿಷ್ಠಾಪನೆ ಮಾಡಲಾಯಿತು.
ಅಷ್ಟಲಕ್ಷ್ಮೀ ಪೂಜೆ, ನವಗ್ರಹ ಪೂಜೆ, ಲಕ್ಷ್ಮೀ ಹೋಮವನ್ನು ಗ್ರಾಮದ ಬಸಯ್ಯ ತಾತಾ ಹೆಬ್ಬಾಳ ವೈದಿಕತ್ವದಲ್ಲಿ ನೆರವೇರಿತು. ಮಹಲರೋಜಾ ಮಲ್ಲಿಕಾರ್ಜುನ ಮುತ್ಯಾ ಸಾನ್ನಿಧ್ಯ ವಹಿಸಿದ್ದರು.
ಲಕ್ಷ್ಮೀ ದೇವಸ್ಥಾನ ಸಮಿತಿ ಸದಸ್ಯರಾದ ಭೀಮರಾಯ ರಾಯಪ್ಪನೋರ್, ಮಹಾದೇವಪ್ಪ ಬಡಿಗೇರ ಪೂಜಾರಿ, ನರಸಪ್ಪ, ಭೀಮಾಶಂಕರ ಬಂಕಲಗಿ, ಶ್ರೀನಿವಾಸ ಬಡಿಗೇರ, ಶಂಕರ ರಾಯಪ್ಪನೋರ್, ಕೃಷ್ಣ ಕಾಂತ ಪೊಲೀಸ್ ಪಾಟೀಲ್, ನರಸಿಂಗಪ್ಪ ಗಂಗೆನೀರ್, ಪೊಲೀಸ್ ನರಸಪ್ಪ ಸಕ್ರೆಪ್ಪನೋರ್ ಬೊಂಬಾಯಿ, ಬಸವರಾಜ ಬಾಜಗಾರ, ರಾಚಪ್ಪ ಉಳ್ಳಾ, ತಾಯಪ್ಪ ನವಾಬುರಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.