ಯಾದಗಿರಿ: ಪ್ರಕೃತಿಯನ್ನು ಪೂಜಿಸಿ, ಪಂಚಭೂತಗಳನ್ನು ಆರಾಧಿಸುವ ಬುಡಕಟ್ಟು ಜನಾಂಗವಾದ ಲಂಬಾಣಿ ಸಮುದಾಯಕ್ಕೆ ದೀಪಾವಳಿ ಕೇವಲ ಹಬ್ಬವಲ್ಲ. ಅದು ಅವರ ಪಾಲಿಗೆ ಸಂಬಂಧಗಳನ್ನು ಬೆಸೆಯುವ ಮತ್ತು ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಕಾಪಿಟ್ಟುಕೊಂಡ ಹೋಗುವ ವೇದಿಕೆಯಾಗಿದೆ. ತಾವು ಯಾವುದೇ ಮೂಲೆಯಲ್ಲಿ ಇದ್ದರೂ ತಲೆಮಾರುಗಳಿಂದ ಬಂದ ಸಂಪ್ರದಾಯಗಳಿಂದ ಹಿಮ್ಮುಖರಾಗುತ್ತಿಲ್ಲ.

ತಾಂಡಾಗಳಲ್ಲಿ ಕೆಲಸ ಇಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಮಹಾನಗರಗಳಿಗೆ ವಲಸೆ ಹೋಗಿದ್ದಾರೆ. ದಶಕಗಳಿಂದ ಅಲ್ಲಿಯೇ ನೆಲೆ ನಿಂತು, ಆಗಾಗ ತವರು ತಾಂಡಾಗಳಿಗೆ ಬಂದು ಹೋಗುತ್ತಿದ್ದಾರೆ. ತಾವು ಬೀಡುಬಿಟ್ಟು ಜಾಗದಲ್ಲಿ ತಾಂಡಾದ ‘ಮೀರಾ’ ಸಂಸ್ಕೃತಿಯನ್ನು ಪಸರಿಸಿ ಸಂಪ್ರದಾಯದ ಮೂಲ ಬೇರನ್ನು ಮುಂಬೈನಲ್ಲಿಯೂ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಬಂಜಾರ ಸಮುದಾಯದವರು ಮುಂಬೈಗೆ ವಲಸೆ ಹೋಗಿದ್ದಾರೆ. ಮುಂಬೈನ ಬಾಂದ್ರಾ, ಅಂಧೇರಿ, ಮಲಾಡ್, ಬೊರಿವಲಿ, ಸಾಂತಾಕ್ರೂಜ್, ಕೊಲಾಬಾ ನಗರ ಸೇರಿದಂತೆ ಹಲವೆಡೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಹಬ್ಬದ ದಿನಗಳಲ್ಲಿ ಅದರಲ್ಲಿ ದೀಪಾವಳಿ ಹಬ್ಬಕ್ಕೆ ವಲಸಿಗರು ಒಂದೆಡೆ ಸೇರಿ ಯುವತಿಯರು ಸಾಂಪ್ರದಾಯಿಕ ಧರಿಸು ತೊಟ್ಟು ಗೋರ ಬೋಲಿ ಭಾಷೆಯ ಹಾಡುಗಳ ಮೂಲಕ ಸಂಭ್ರಮಿಸುವುದನ್ನು ಮರೆತಿಲ್ಲ.

‘ಮುಂಬೈನ ಕೊಲಾಬಾದಲ್ಲಿ ನಡೆಯುವ ಮೀರಾ ಆಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವವರೂ ಬಂದು ಕೂಡಿಕೊಳ್ಳುತ್ತಾರೆ. ಯುವತಿಯರು ಲಂಬಾಣಿ ಸಮುದಾಯದ ಲಂಗ, ಜಾಕೀಟು, ಛಾಟೀಯದಂತಹ ಸಮುದಾಯವನ್ನು ಪ್ರತಿ ಬಿಂಬಿಸುವ ಬಟ್ಟೆಗಳನ್ನು ತೊಟ್ಟಿರುತ್ತಾರೆ. ದೀಪವನ್ನು ಬೆಳಗಿ ಹಲಗೆ ವಾದನ, ಬಂಜಾರ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ’ ಎನ್ನುತ್ತಾರೆ ಮುಂಬೈನಲ್ಲಿನ ಸಾಮಾಜಿಕ ಕಾರ್ಯಕರ್ತ ರಾಮು ರಾಠೋಡ.

‘ತಾಂಡಾದಲ್ಲಿ ಆಚರಣೆ ಮಾಡುವಂತೆ ವಾರಗಟ್ಟಲೆ ಆಚರಿಸಲು ಆಗುವುದಿಲ್ಲ. ಲಕ್ಷ್ಮಿ ಪೂಜೆಯ ದಿನ ಹಾಗೂ ಮರು ದಿನದಂದು ದೇವಸ್ಥಾನಗಳು, ಪ್ರಮುಖ ಸ್ಥಳಗಳಲ್ಲಿ ವೇದಿಕೆ ನಿರ್ಮಿಸಿ ನೃತ್ಯ, ಹಾಡುಗಳ ಆಯೋಜನೆ ಮಾಡಲಾಗುತ್ತದೆ. ನಗರ ಜೀವನಕ್ಕೆ ಮನಸೋತ ಕೆಲವರು ಪಾಲ್ಗೊಳ್ಳವುದಿಲ್ಲ. ಹೀಗಾಗಿ, ನಮ್ಮ ಸಮುದಾಯದ ಪ್ರತಿಯೊಬ್ಬ ಯುವತಿ, ಮಹಿಳೆಯರು ಪಾಲ್ಗೊಂಡು ನಮ್ಮ ಸಂಪ್ರದಾಯವನ್ನು ನಗರದಲ್ಲಿಯೂ ಉಳಿಯುವಂತೆ ಆಗಲಿ ಎಂಬ ಉದ್ದೇಶದಿಂದ ಉತ್ತಮವಾಗಿ ನೃತ್ಯ ಮಾಡಿದವರಿಗೆ ಬಹುಮಾನ ನೀಡಿ, ಸನ್ಮಾನಿಸಲಾಗುತ್ತದೆ’ ಎಂದರು.

‘ತಂಡಗಳನ್ನು ಕಟ್ಟಿಕೊಂಡು ಸ್ಪರ್ಧೆ’

‘ಕಾಲೇಜು ಕೆಲಸಕ್ಕೆ ಹೋಗುವ ಯುವತಿಯರು ನೃತ್ಯ ಸ್ಪರ್ಧೆಗಳಲ್ಲಿ ಗೆಲ್ಲಲು ತಮ್ಮದೆಯಾದ ತಂಡಗಳನ್ನು ಕಟ್ಟಿಕೊಂಡು ಸ್ಪರ್ಧೆ ಮಾಡುವ ಮನೋಭಾವ ಹೆಚ್ಚುತ್ತಿದೆ’ ಎನ್ನುತ್ತಾರೆ ಭಾಷು ರಾಠೋಡ. ‘ವಲಸೆ ಹೋದ ಕೆಲವರು ದೀಪಾವಳಿಗೆ ತವರು ತಾಂಡಾಗಳಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಬರಲು ಆಗದವರು ಮುಂಬೈನಲ್ಲಿಯೇ ಆಚರಿಸುತ್ತಾರೆ. ಬಂಜಾರ ರಿಮಿಕ್ಸ್ ಹಾಡುಗಳಿಗೆ ಕುಣಿದು ಬಹುಮಾನವಾಗಿ ಬಂದಂತಹ ಹಣದಲ್ಲಿ ಕೆಲವರು ಸಂಕಷ್ಟದಲ್ಲಿ ಇರುವವರಿಗೆ ಕೊಡುತ್ತಾರೆ’ ಎಂದರು. ‘ತಾಂಡಾಗಳಲ್ಲಿ ಮಾಡಿದಂತೆ ನಾಯಕನ ಮನೆಯ ಮುಂದೆ ಹೋಗಿ ಆಚರಣೆ ಮಾಡುವುದು 15 ದಿನಗಳು ಮುಂಚಿತವಾಗಿ ನೃತ್ಯಕ್ಕೆ ತಾಲೀಮು ಮಾಡಿಕೊಳ್ಳಲು ಮುಂಬೈನಲ್ಲಿ ಇದ್ದವರಿಗೆ ಆಗುವುದಿಲ್ಲ. ಕೆಲಸ ಕಾಲೇಜಿನ ಬಿಡುವಿನ ನಡುವೆ ಒಂದೆಡೆ ಸೇರಿ ತಯಾರಿ ಮಾಡಿಕೊಂಡು ಪಾಲ್ಗೊಳ್ಳುವ ಪ್ರವೃತ್ತಿ ಯುವತಿಯರಲ್ಲಿದೆ’ ಎಂದು ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.