ಶಿಶುನಾಳ ಶರೀಫ ಮಠಕ್ಕೆ ಭೂದಾನ

ಕಕ್ಕೇರಾ: ಸಮೀಪದ ಅಂಬಾನಗರದ ಗವಿರಂಗ ಹೊರವಲಯದಲ್ಲಿ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಮಠಕ್ಕೆ ಶುಕ್ರವಾರ ವೀರಸಂಗಪ್ಪ ಸಾಹುಕಾರ ಕೊಡೇಕಲ್ ಭೂದಾನ ನೀಡಿದರು.
ಬಳಿಕ ಮಾತನಾಡಿದ ಭೂದಾನಿ ವೀರಸಂಗಪ್ಪ ಸಾಹುಕಾರ ಕೊಡೇಕಲ್, ಸಂತ ಶಿಶುನಾಳ ಶರೀಫರ ಮಠ ನಿರ್ಮಸಿಲಾಗುವುದು. ಪಟ್ಟಣದ ಶಿಶುನಾಳ ಶರೀಫ ಎಂದೇ ಪ್ರಖ್ಯಾತರಾದ ಶ್ರೀಗಳಿಗೆ ನಾನು ಈ ಹಿಂದೆ ಹೇಳಿದಂತೆ ಇಂದು ಸ್ಥಳವನ್ನು ಪರೀಶೀಲನೆ ಮಾಡಿದ್ದೇವೆ’ ಎಂದು ಹೇಳಿದರು.
ಶಿಶುನಾಳ ಶರೀಫ ಶ್ರೀ ಮಾತನಾಡಿ, ಸಂತ ಶಿಶುನಾಳ ಶರೀಫ ಮಠಕ್ಕೆ ಸ್ಥಳ ನೀಡಿದ ವೀರಸಂಗಪ್ಪ ಸಾಹುಕಾರ ಅವರು ಶರಣರ ಮೇಲೆ ಇಟ್ಟ ನಂಬಿಕೆ ಅಮೂಲ್ಯವಾದುದ್ದು, ಶೀಘ್ರದಲ್ಲಿಯೇ ಪೂಜೆ ಕಾರ್ಯಕ್ರಮಗಳು ಮಾಡಲಾಗುವುದು ಎಂದು ಹೇಳಿದರು.
ಮಾಳಿಂಗರಾಯ ಪೂಜಾರಿ, ಜಟ್ಟೆಪ್ಪ ಯಲಗಟ್ಟಿ, ನಿಂಗಪ್ಪ ಮಾಲಗತ್ತಿ, ಹಣಮಂತ್ರಾಯ ಯಲಗಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.