ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಗುರುಮಠಕಲ್: 198 ಮಂದಿ ಮನೆಯಿಂದಲೇ ಮತ

163 ಹಿರಿಯ ನಾಗರಿಕರು, 35 ಅಂಗವಿಕಲರ ನೋಂದಣಿ
Published 23 ಏಪ್ರಿಲ್ 2024, 5:12 IST
Last Updated 23 ಏಪ್ರಿಲ್ 2024, 5:12 IST
ಅಕ್ಷರ ಗಾತ್ರ

ಗುರುಮಠಕಲ್: 2024ರ ಲೋಕಸಭಾ ಚುನಾವಣೆಯಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ (ನಮೂನೆ-12 ಡಿ) ಅವಕಾಶ ಬಳಸಿ 198 ಜನ ಮತ ಚಲಾಯಿಸಲಿದ್ದಾರೆ.

ಈಗಾಗಲೇ ಕ್ಷೇತ್ರದ ಮತಗಟ್ಟೆ ಮಟ್ಟದಲ್ಲಿ ನಡೆದ ನಮೂನೆ 12 ಡಿ ನೋಂದಣಿಗೆ 85 ವರ್ಷಕ್ಕೂ ಮೇಲ್ಪಟ್ಟ ವಯೋಮಾನದ 163 ಜನ ಹಿರಿಯ ನಾಗರಿಕರು (ಎವಿಎಸ್) ಮತ್ತು 35 ಜನ ಅಂಗವಿಕಲ (ಎವಿಪಿಡಿ) ಮತದಾರರು ಸೇರಿ 198 ಜನ ಮತದಾರರು ಮನೆಯಿಂದಲೇ ಮತ ಹಕ್ಕು ಚಲಾವಣೆಗೆ ಇಚ್ಚಿಸಿ ನೋಂದಾಯಿಸಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಮಾಹಿತಿ ನೀಡಿದ್ದಾರೆ.

ಮತಗಟ್ಟೆ ಮಟ್ಟದ ಸಮೀಕ್ಷೆ ಮತ್ತು ನೋಂದಣಿಯಂತೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ವಯೋಮಾನಕ್ಕೂ ಮೇಲ್ಪಟ್ಟ 43 ಪುರುಷ ಮತ್ತು 120 ಮಹಿಳಾ ಮತದಾರರು ಸೇರಿ 163 ಎವಿಎಸ್ ಹಾಗೂ 19 ಪುರುಷ ಮತ್ತು 16 ಮಹಿಳಾ ಮತದಾರರು ಸೇರಿ 35 ಎವಿಪಿಡಿ ಮತಗಳು ಮನೆಯಿಂದಲೇ ಚಲಾವಣೆ ಆಗಲಿವೆ.

ಮನೆಯಿಂದ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 284 ಮತಗಟ್ಟೆಗಳನ್ನು ಒಳಗೊಂಡ 12 ಮಾರ್ಗಗಳನ್ನು ರಚಿಸಲಾಗಿದೆ. ಪ್ರತಿ ಮಾರ್ಗಕ್ಕೂ 7 ಸಿಬ್ಬಂದಿಯ ತಂಡ ರಚಿಸಿದ್ದು, ಅವುಗಳನ್ನು ಈಗಾಗಲೇ ಗುರುತಿಸಲಾದ ನಮೂನೆ-12ಡಿ ಅಡಿಯಲ್ಲಿನ ಮತದಾರರ ಮನೆ-ಮನೆಗೆ ತೆರಳಿ ಮತಗಳನ್ನು ಸಂಗ್ರಹಿಸಲು ಸನ್ನದ್ಧಗೊಳಿಸಲಾಗಿದೆ ಎಂದು ಎಆರ್‌ಒ ವೀರೇಶ ಬಿರಾದರ ಹೇಳಿದರು.

ಮನೆಯಿಂದ ಮತ ಸಂಗ್ರಹಿಸುವ ನಿಟ್ಟಿನಲ್ಲಿ 12 ಮಾರ್ಗಗಳಲ್ಲಿ ನಿಯೋಜಿಸಿದ ಎಲ್ಲಾ ತಂಡಗಳಿಗೂ ಈಗಾಗಲೇ ನಮೂನೆ-12ಡಿ ಅಡಿಯ ಮತ ಸಂಗ್ರಹಕ್ಕೆ ಸಂಬಂಧಿಸಿದಂತೆ ತರಬೇತುಗೊಳಿಸಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಪಾರದರ್ಶಕವಾಗಿ ಮತ ಸಂಗ್ರಹ ಮಾಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

ಆಯೋಗದಿಂದ ದಿನಾಂಕ ನಿಗದಿಯಾಗುತ್ತಲೇ ಎರಡು ದಿನಗಳಲ್ಲಿ ಅರ್ಹ ನೋಂದಾಯಿತ ಎವಿಪಿಡಿ ಮತ್ತು ಎವಿಎಸ್ ಮತದಾರರಿಂದ ಮನೆಯಿಂದಲೇ ಮತ ಸಂಗ್ರಹಿಸಲಾಗುವುದು. ಏಪ್ರಿಲ್ 25 ರಿಂದ 30ರೊಳಗೆ ದಿನಾಂಕ ನಿಗದಿಯಾಗುವ ನೀರಿಕ್ಷೆಯಿದೆ.
-ವೀರೇಶ ಬಿರಾದರ, ಸಹಾಯಕ ಚುನಾವಣಾಧಿಕಾರಿ
ಮನೆಯಿಂದಲೇ ಮತದ ಪಾರದರ್ಶಕತೆ ದೃಷ್ಟಿಯಿಂದ ಆಯಾ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮತ ಪೆಟ್ಟಿಗೆ ಖಾಲಿಯಿದೆಯೆಂದು ಖಾತ್ರಿಪಡಿಸಿ ಮತ ಸಂಗ್ರಹಿಸಲಾಗುವುದು. ನಿಯೋಜಿತ ತಂಡಗಳು ನಿಗದಿಯಾದ ಎರಡು ದಿನಗಳಲ್ಲಿ ಮತ ಸಂಗ್ರಹಿಸಲಿವೆ.
- ಶ್ರೀನಿವಾಸ ಬಿರಾದರ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT